ದಿಲ್ಲಿಯಲ್ಲಿ IPL ಇಲ್ಲ: ಸಿಸೋಡಿಯಾ ಸ್ಪಷ್ಟನೆ

ಹೊಸದಿಲ್ಲಿ, ಮಾ.12: ಕೋವಿಡ್-19 ವೈರಸ್ ಹರಡುವುದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಇನ್ನಷ್ಟು ಹೆಜ್ಜೆ ಇಟ್ಟಿರುವ ದಿಲ್ಲಿ ಸರಕಾರವು, ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಸಹಿತ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸಿದೆ. 200 ಹಾಗೂ ಅದಕ್ಕಿಂತ ಹೆಚ್ಚು ಜನ ಸೇರುವ ಸೆಮಿನಾರ್, ಕಾನ್ಫರೆನ್ಸ್ ಹಾಗೂ ಯಾವುದೇ ದೊಡ್ಡ ಕಾರ್ಯಕ್ರಮಕ್ಕೆ ನಿಷೇಧ ಅನ್ವಯವಾಗಲಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮಾಹಿತಿ ನೀಡಿದ್ದಾರೆ.

ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಹಾಗೂ ಎಸ್‌ಡಿಎಂ ನಗರದಾದ್ಯಂತ ಸರಕಾರಿ ಆದೇಶವನ್ನು ಪಾಲಿಸುವಂತೆ ನೋಡಿಕೊಳ್ಳಬೇಕೆಂದು ಸಿಸೋಡಿಯಾ ಸೂಚಿಸಿದ್ದಾರೆ.

ಮಾ.31ರ ತನಕ ದಿಲ್ಲಿಯ ಎಲ್ಲ ಶಾಲಾ-ಕಾಲೇಜುಗಳು ಹಾಗೂ ಸಿನೆಮಾ ಮಂದಿರಗಳನ್ನು ಮುಚ್ಚಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ ಮರುದಿನ ದಿಲ್ಲಿಯಲ್ಲಿ ಯಾವುದೇ ಕ್ರಿಡಾ ಚಟುವಟಿಕೆ ನಡೆಯುವುದಿಲ್ಲ ಎಂದು ಸಿಸೋಡಿಯಾ ಮಾಹಿತಿ ನೀಡಿದ್ದಾರೆ.

Please follow and like us:
error