ಗವಿಮಠದ ಹಳೇ ವಿದ್ಯಾರ್ಥಿ ಬಳಗದಿಂದ ಗವಿಮಠದ ಕೋವಿಡ್ ಆಸ್ಪತ್ರೆಗೆ 665001 ದೇಣಿಗೆ

ಗವಿಮಠದ ಕೊವೀಡ್ ಆಸ್ಪತ್ರೆಗೆ 665001 ರೂ ಹಣವನ್ನು ದೇಣಿಗೆಯಾಗಿ ನೀಡಿದ ಗವಿಮಠದ ಹಳೇ ವಿದ್ಯಾರ್ಥಿ ಬಳಗ

ಕೊಪ್ಪಳ : ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮಠದ ವೃದ್ಧಾಶ್ರಮವನ್ನೆ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಜನಸೇವೆಗೆ ನೀಡಿದ್ದಾರೆ.‌ಇದರ ಜಿತೆ ಶ್ರೀಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸೋಂಕಿತರ ಆರೋಗ್ಯಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದನ್ನು ಅರಿತ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯ 1992-93 ರ ವರ್ಷದ ಎಸ್ ಎಸ್ ಎಲ್ ಸಿ ಬ್ಯಾಚ್ ಹಾಗೂ ಶ್ರೀ ಗವಿಸಿದ್ಧೇಶ್ವರ ಪದವಿಪೂರ್ವ ಮಹಾವಿದ್ಯಾಲಯದ
1994-95ರ ಸಾಲಿನ ದ್ವಿತೀಯ ಪಿಯುಸಿಯ ಸ್ನೇಹಿತರ ಬಳಗ ಬರೋಬ್ಬರಿ ಸ್ವಯಂಸ್ಫೂರ್ತಿಯಿಂದ 665001 ರೂ ಹಣವನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ನೀಡಿದ್ದಾರೆ. ಶ್ರೀಗಳ ಮುಖಾಂತರ ಗವಿಮಠದ ಕೊವೀಡ್ ಆಸ್ಪತ್ರೆಗೆ ನೀಡಿದ್ದು, ಶ್ರೀಗಳಿಗೆ ಹಣವನ್ನು ಅರ್ಪಿಸಿದ್ದಾರೆ

Please follow and like us:
error