ಗಂಗಾವತಿ ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ : ೬ ಜನರ ವಿರುದ್ದ ಪ್ರಕರಣ ದಾಖಲು

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲೂ ರೆಮ್ ಡಿಸಿವಿರ್ ಇಂಜಕ್ಷನ್ ಕಾಳ ಸಂತೆಯಲ್ಲಿ ಮಾರಾಟವಾಗಿರುವ ದೂರುಗಳ ಹಿನ್ನೆಲೆಯಲ್ಲಿ
ರಾತ್ರೋರಾತ್ರಿ ಅಧಿಕಾರಿಗಳು ದಾಳಿ ಮಾಡಿದ್ರು. ಜಿಲ್ಲೆಯ ಗಂಗಾವತಿ ನಗರದ ಖಾಸಗಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳ ತಂಡ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದರು.
ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದು, ನಗರದ ವಿವಿಧ ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಮೇಲೆ ಅಧಿಕಾರಿಗಳ ದಾಳಿ ಪರಿಶೀಲನೆ ನಡೆಸಿದರು. ಇದೇ ವೇಳೆಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು ರೆಮ್ಡಿಸಿವಿರ್ ಎಲ್ಲಿಂದ ಖರೀದಿಸಲಾಗಿದೆ. ಎಷ್ಟು ಖರೀದಿಸಲಾಗಿದೆ ಅದರ ಬಿಲ್ ಗಳ ದಾಖಲೆಗಳನ್ನು ಕೊಡಿ ಎಂದಿದ್ದಾರೆ. ಗಂಗಾವತಿಯಲ್ಲಿ ಪಾನ್ ಶಾಪ್ ನಲ್ಲಿ ರೆಮ್ ಡಿಸಿವಿರ್ ಮಾರಾಟ ಆಗ್ತಿರೋ ಆರೋಪ ಬಂದಿದ್ದು, ಪ್ರತಿ ಒಂದು ಡೋಸ್ ಗೆ 40 ಸಾವಿರ ರೂಪಾಯಿಗೆ ಮಾರಾಟ ಆಗ್ತಾ ಇತ್ತು ಎನ್ನುವ ಆರೋಪ ಕೇಳಿಬಂದಿದೆ.

ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದ ಪೋಲಿಸರು ೬ ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡು ೧೩ ರಿಮ್ಡಿಸಿವಯರ್ ಔಷಧಿ ಬಾಟಲಗಳನ್ನು ವಶ ಪಡೆಸಿಕೊಂಡಿದ್ದಾರೆ.

ಚಂದ್ರಶೇಖರ.ಎನ್.ಹರಿಹರ , ಪೊಲೀಸ್ ಇನ್ಸ್‌ಪೆಕ್ಟರ್‌ , ಸೈಬರ್ , ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೊಲೀಸ್ ಠಾಣೆ , ಕೊಪ್ಪಳ ,ದಲ್ಲಿ ಪ್ರಕರಣ ದಾಖಲಾಗಿದೆ

ಆರೋಪಿತರು 1 ) ಪವನ ವಟಕುಟ್ಟಿ ತಂದಿ ವಿ ಕೋಟೇಶ್ವರ ರಾವ್ ಸಾ ; ಬಾಪಿರೆಡ್ಡಿ ಕ್ಯಾಂಪ್ ತಾ : ಗಂಗಾವತಿ , 2 ) ರಾಧಾಕೃಷ್ಣ ತ ೦ ದಿ ಶ್ರೀ ಹರಿ ಸಿಲಂ ವಯಾ : 32 ವರ್ಷ ಜಾ : ಈಳಗೇರ ಉ : ಒಟಿ ಟೆಕ್ನಿಷಿಯನ್ ಸಾ : ತೊಂಡಿಹಾಳ ಕ್ಯಾಂಪ್ ತಾ : ಕಾರಟಗಿ , 3 ) ಅಭಿಷೇಕ ತಂದಿ ಶಿವಪ್ಪ ಮೆಟ್ರಿ ವಯ : 23 ವರ್ಷ ಜಾ : ಕುರುಬರ ಉ : ಚಂದ್ರಪ್ಪ ಹಾಸ್ಪಿಟಲ್ ನಲ್ಲಿ ನರ್ಸಿಂಗ್ ಕೆಲಸ ಸಾ : ಹೊಸಳ್ಳಿ ತಾ : ಗಂಗಾವತಿ , 4 ) ಮಣಿಕಂಠ ತಂದಿ ಸಿದ್ಧಪ್ಪ ಹಟ್ಟಿ ವಯ : 20 ವರ್ಷ ಜಾ : ಕುರುಬರ ಉ : ನರ್ಸಿಂಗ್ ಕೆಲಸ ಸಾ : ಹೂಸಳ್ಳಿ , ತಾ : ಗಂಗಾವತಿ , 5 ) ಶಂಕರ ತಂದಿ ದುರುಗಪ್ಪ ಹೊಸಳ್ಳಿ ವಯ : 23 ವರ್ಷ ಜಾ : ಕುರುಬರ ಉ : ನರ್ಸಿಂಗ್ ಕೆಲಸ ಸಿಟಿ ಹಾಸ್ಪಿಟಲ್ ಗಂಗಾವತಿ ಸಾ : ಹೊಸಳ್ಳಿ ತಾ : ಗಂಗಾವತಿ , 6 ) ಅಕ್ಷಯ್ ತಂದಿ ಮಲ್ಲಿಕಾರ್ಜುನ್ ಕೋರಿಶೆಟ್ಟರ್‌ ವಯ : 22 ವರ್ಷ ಜಾ : ಲಿಂಗಾಯತ ೮೮ ; ಮಡಿಕಲ್ ಶಾಪ್ ನಲ್ಲಿ ಕೆಲಸ ಸಾ : ಮರಕುಂಬಿ ತಾ : ಗಂಗಾವತಿ ,

ಜಪ್ತು ಮಾಡಿದ ಮಾಲು 13 ರೆಮಡೆಸಿವರ್ ಔಷದಿಯ ಬಾಟಲಿಗಳು , 04 ಮೋಬೈಲ್ ಫೋನ್ ಗಳು 09 ತನಿಖಾಧಿಕಾರಿಯ ಹೆಸರು ಮಾರುತಿ , ಸಿಹೆಚ್ ಸಿ -07 , ಸೈ.ಆ.ಮಾ.ಅ.ಪೂ.ಠಾ , ಕೊಪ್ಪಳ

ಪ್ರಕರಣದ ಸಂಕ್ಷಿಪ್ತ ಸಾರಾಂಶ : ನಮೂದಿಸಿದ ಆರು ಜನ ಆರೋಪಿತರು ಎಲ್ಲರೂ ಕೂಡಿಕೊಂಡು ಕೊವಿಡ್ -19 ಉಪಚಾರಕ್ಕೆ ಸರ್ಕಾರ ರೆಮ್ಡಿಸಿವಿ‌ ಔಷಧಿಯನ್ನು ಅತಿ ಅವಶ್ಯಕ ಔಷಧಿ ಅಂತಾ ಪರಿಗಣಿಸಿದ್ದರೂ , ಕೋವಿಡ್ -19 ರೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ವಂಚಿಸುವ ಉದ್ದೇಶದಿಂದ ಕೋವಿಡ್ -19 ರೋಗಿಗಳಿಗೆ ನೀಡುವ ರೆಮ್‌ಡಿಸಿವರ್ ಎಂಬ ಚುಚ್ಚುಮದ್ದು ಔಷಧಿಯನ್ನು ಅಪ್ರಮಾಣಿಕವಾಗಿ ಪಡೆದುಕೊಂಡು , ಸರ್ಕಾರ ಈ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ತಿಳಿಸಿದ್ದರೂ ಕೂಡ ಇದನ್ನು ಉಲ್ಲಂಘಿಸಿ , ಅವುಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು , ಅಲ್ಲದೇ ಮಾರಾಟ ಮಾಡಲು ತಮ್ಮ ತಾಬಾದಲ್ಲಿ ಇಟ್ಟುಕೊಂಡಾಗ ಸಿಕ್ಕಿದ್ದು , ಸದರಿಯವರಿಂದ ಜಪ್ತ ಪಡಿಸಿಕೊಂಡ 13 ರೆಮಡೆಸಿವರ್ ಔಷದಿಯ ಬಾಟಲಿಗಳು , 04 ಮೊಬೈಲ್ ಫೋನ್ ಗಳು ಹಾಗೂ ವಶಕ್ಕೆ ಪಡೆದುಕೊಂಡ ಆರೋಪಿ ನಂ -2 ರಿಂದ 6 ನೇದ್ದವರನ್ನು ದಾಳಿ ಪಂಚನಾಮೆ ಸಮೇತ ಹಾಜರಪಡಿಸುತ್ತಿದ್ದು , ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ

Please follow and like us:
error