ಕೋಟಿ ದಾಟಿದ ಕೊರೋನ ವೈರಸ್ ಪ್ರಕರಣಗಳು : ಮೃತರ ಸಂಖ್ಯೆ 1.45 ಲಕ್ಷಕ್ಕೇರಿಕೆ

ಹೊಸದಿಲ್ಲಿ: ಭಾರತವು ಅಮೆರಿಕದ ಬಳಿಕ ಕೊರೋನ ವೈರಸ್ ಪ್ರಕರಣದಲ್ಲಿ 1 ಕೋಟಿ ಗಡಿ ದಾಟಿದ ವಿಶ್ವದ ಎರಡನೇ ದೇಶ ಎನಿಸಿಕೊಂಡಿದೆ. ಜನವರಿ 30 ರಂದು ಕೇರಳದಲ್ಲಿ ಮೊದಲ ಪ್ರಕರಣ ವರದಿಯಾದ ಬಳಿಕ ದೇಶದಲ್ಲಿ 95.5 ಲಕ್ಷಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡಿದ್ದಾರೆ. ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಟದ ವೇಳೆ 1.45 ಲಕ್ಷ ರೋಗಿಗಳು ಮೃತಪಟ್ಟಿದ್ದಾರೆ.

ದೇಶದಲ್ಲೀಗ ಚೇತರಿಕೆಯ ಪ್ರಮಾಣ ಹೆಚ್ಚುತ್ತಿದೆ. ಮೇ ತಿಂಗಳಲ್ಲಿ 50,0000ವಿದ್ದ ಚೇತರಿಕೆಯ ಪ್ರಮಾಣ ಡಿಸೆಂಬರ್‌ಗೆ 95ಕ್ಕೂ ಅಧಿಕ ಲಕ್ಷ ತಲುಪಿದೆ ಎಂದು ಇಂದು ಬೆಳಗ್ಗೆ ಸರಕಾರವು ತಿಳಿಸಿದೆ.

 

ಭಾರತವು 1 ಕೋಟಿ ಪ್ರಕರಣಗಳನ್ನು ದಾಟಲು 325 ದಿನಗಳನ್ನು ತೆಗೆದುಕೊಂಡಿದೆ. ಕಳೆದ 24 ಗಂಟೆಗಳಲ್ಲಿ 25,152 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಭಾರತದಲ್ಲಿ ಒಟ್ಟು ಕೇಸ್‌ಗಳು 1,00,04,599 ತಲುಪಿದೆ ಎಂದು ಸರಕಾರದ ಅಂಕಿಅಂಶದಿಂದ ತಿಳಿದುಬಂದಿದೆ.

ದೇಶದಲ್ಲಿ ಪ್ರತಿದಿನ ಕೊರೋನ ಪ್ರಕರಣ ಇಳಿಮುಖವಾಗುತ್ತಿರುವುದು ಕೋವಿಡ್ ವಿರುದ್ಧ ಹೋರಾಟದಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ. ಇತ್ತೀಚೆಗೆ ದೈನಂದಿನ ಹೊಸ ಪ್ರಕರಣ 22,065ಕ್ಕೆ ಇಳಿದಿತ್ತು. ಇದು ಐದು ತಿಂಗಳಲ್ಲಿ ಅತ್ಯಂತ ಕಡಿಮೆ ಪ್ರಕರಣವಾಗಿತ್ತು.

Please follow and like us:
error