ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ವಿಡಿಯೋ ವೈರಲ್

Bellary ಬಳ್ಳಾರಿಯಲ್ಲಿ ನಿನ್ನೆ ಒಂದೇ ದಿನ ಕೊರೊನಾದಿಂದ 9 ಸಾವುಗಳು ಸಂಭವಿಸಿವೆ. ನಿನ್ನೆ ಜಿಲ್ಲಾಡಳಿತ ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದೆ. ಈ ಸಂಬಂಧ ಶವಸಂಸ್ಕಾರದ ವಿಡಿಯೋ ಒಂದು ಹರಿದಾಡ್ತಿದ್ದು. ಮೃತದೇಹಗಳನ್ನು ಗುಂಡಿಯಲ್ಲಿ ಎಸೆಯುತ್ತಿರುವ ಭಯಾನಕ ದೃಶ್ಯಾವಳಿಗಳು ಬೆಚ್ಚಿ ಬೀಳಿಸುತ್ತಿವೆ. ಮನುಷ್ಯನ ಜೀವನ ಇಷ್ಟೇನಾ ಎನ್ನುವ ಭಾವನೆ ಬರುವಂತೆ ದೃಶ್ಯಗಳಲ್ಲಿ ಕಾಣುತ್ತಿದೆ. ಕನಿಷ್ಟಪಕ್ಷ ಶವಗಳಿಗೆ ಗೌರವ ಕೊಡದೆ ಗುಂಪಾಗಿ ಬಿಸಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ನಿನ್ನೆಯಷ್ಟೇ ಒಂಬತ್ತು ಜನ ಸಾವಾಗಿತ್ತು. ಕೊರೊನಾ ಭೀತಿಯಿಂದ ಸಹ ಶವಸಂಸ್ಕಾರವನ್ನು ಹೀಗೆ ಅವಸರ ಅವಸರವಾಗಿ ಗುಂಡಿಯಲ್ಲಿ ಬಿಸಾಡಿ ಹೋಗುತ್ತಿರುವ ವಿಡಿಯೋ ಇದೀಗ ಎಂಥವರ ಎದೆಯನ್ನೂ ಝಲ್ಲೆನಿಸುತ್ತಿವೆ

https://www.facebook.com/kannadanet/videos/620778555459594/

Please follow and like us:
error