ಕೊಪ್ಪಳ ತಲುಪಿದ ಕರೋನಾ ವಾಕ್ಸಿನ್

Koppal ಕೋವಿಡ್‍ ಸೋಂಕು ನಿವಾರಿಸುವ ಸಂಜೀವಿನಿ ಸರಿಯಾಗಿ ರಾತ್ರಿ ೭ ಗಂಟೆಗೆ ಕೊಪ್ಪಳ ನಗರದ ಹಳೆ ಜಿಲ್ಲಾಸ್ಪತ್ರೆಗೆ ನೇರವಾಗಿ ಬಾಗಲಕೋಟೆಯಿಂದ ಬಂದು ತಲುಪಿದೆ.

೬೫೦೦ ಡೋಸ್ ಹಾಗೂ ೩೭೮೦೦ ಸಿರೇಂಜ್ ಹೊತ್ತ ವ್ಯಾಕ್ಸಿನ್ ವ್ಯಾನ್ ಈಗಾಗಲೇ ಬಂದು ತಲುಪಿದೆ. ವ್ಯಾಕ್ಸಿನನ್ನು ಆರೋಗ್ಯ ಅಧಿಕಾರಿಗಳು ಸಿಬ್ಬಂದಿ ಸ್ಟೋರ್ ರೂಮಿನಲ್ಲಿ ಸಂಗ್ರಹಿಸಿದ್ರು
ಆರ್ ಸಿಎಚ್ ಅಧಿಕಾರಿ ಡಾ. ಜಂಬಯ್ಯ ಈ ಸಂದರ್ಭದಲ್ಲಿ ಮಾತ್ನಾಡಿ, ಜನವೆರಿ ೧೬ ರಂದು ೪ ಸೆಂಟರ್ ನಲ್ಲಿ ಪ್ರಯೋಗ ಮಾಡಲಾಗುವುದು ನಂತರ ಇನ್ನು ೧೦ ಸೆಂಟರ್ ಗಳನ್ನು ಗುರುತಿಸಿ ವ್ಯಾಕ್ಸಿನ್ ನೀಡಲಾಗುವುದು ಅಂತಾ ಮಾಹಿತಿ ನೀಡಿದರು, ಒಟ್ಟು ೧೦೩೩೫ ಜನರನ್ನು ಗುರುತಿಸಿದ್ದು, ಮೊದಲೆ ಹಂತದಲ್ಲಿ ೬೫೦೦ ಡೋಸ ಗಳನ್ನು ನೀಡಲಾಗುತ್ತದೆ.

Please follow and like us:
error