ಕೆಎಫ್ಐಎಲ್ ವತಿಯಿಂದ 100 ಎಂಎ ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಮೆಷಿನ್ ಹಸ್ತಾಂತರ

Kannadanet : ಕೊಪ್ಪಳ ಗವಿಸಿದ್ದೇಶ್ವರ ಮಠದಿಂದ ಪ್ರಾರಂಭವಾಗಿರುವ 100. ಹಾಸಿಗೆಯ ಕೊವೀಡ್ ಹಾಸ್ಪಿಟಲ್ ಗೆ ಹತ್ತಿರದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ 100 ಎಂಎ ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಯಂತ್ರವನ್ನು ದಿ 28-5-2021 ರಂದು ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ .ಆರ್.ವಿ.ಗುಮಾಸ್ತೆ ಆಸ್ಪತ್ರೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಮತ್ತು ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಉದವ್ ಕುಲಕರ್ಣಿ ಉಪಸ್ಥಿತರಿದ್ದರು. ಈ ಯಂತ್ರದಿಂದ ಕೊವೀಡ್ ಲಕ್ಷಣವಿರುವ ರೋಗಿಯ ರೋಗರಕ್ಷಣದ ಜೊತೆಗೆ ರೋಗಿಯ ಶ್ವಾಸಕೋಶದಲ್ಲಿ ಇರುವ ಲಕ್ಷಣಗಳನ್ನು ಸಹ ಪತ್ತೆಹಚ್ಚಲು ಈ ಯಂತ್ರವು ಸಹಾಯ ಮಾಡುತ್ತದೆ. ಇದಲ್ಲದೆ, ಅಗತ್ಯವಿದ್ದರೆ ಇದರಿಂದ ಸಿಟಿ ಸ್ಕ್ಯಾನ್ ಮಾಡಿಸಲು ಸಹ ಉಪಯೋಗವಾಗುತ್ತದೆ.

Please follow and like us:
error