ಕರೋನಾ 2ನೇ ಅಲೆಯ ಶಾಕ್ : ಜಿಲ್ಲೆಯಲ್ಲಿ ಇಂದು ಮೊದಲ ಸಾವು

ಕೊಪ್ಪಳ :  ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಕರೋನಾ ಸಣ್ಣದಾಗಿ ದಾಳಿ ಶುರುವಿಟ್ಟುಕೊಂಡಿದೆ.  ಕಳೆದ ಒಂದು ವಾರದಿಂದ ಸತತವಾಗಿ ಕರೋನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇಂದು 20 ಪ್ರಕರಣಗಳು ವರದಿಯಾಗಿದ್ದು ಒಂದು ಸಾವು ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 286ಕ್ಕೆ ಏರಿಕೆಯಾಗಿದೆ. ಕಳೆದ 5 ತಿಂಗಳಿಂದ ಯಾವುದೇ ಸಾವು ವರದಿಯಾಗಿದ್ದಿಲ್ಲ ಆದರೆ ಇಂದು ಕರೋನಾದಿಂದ ಸಾವನ್ನಪ್ಪಿರುವುದು ಆತಂಕ ಮೂಡಿಸುವಂತಾಗಿದೆ.

ಲಸಿಕೆ ಬಂದಿದೆ ಯಾವುದೇ ರೀತಿಯ ಆತಂಕದ ಅಗತ್ಯವಿಲ್ಲ ಎನ್ನುವ ಸ್ಥಿತಿಯಲ್ಲಿದ್ದವರೆಲ್ಲರಿಗೂ ಇದು ಶಾಕ್ ನೀಡುವಂತಾಗಿದೆ.  ಕೊಪ್ಪಳ ತಾಲೂಕಿನ 79 ವರ್ಷದ ವ್ಯಕ್ತಿ ಹೋಮ್ ಐಸೋಲೇಷನ್ ನಲ್ಲಿದ್ದವರು ಸಾವನ್ನಪ್ಪಿದ ದುರ್ದೈವಿ. ಜನತೆ ಕರೋನಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಎಚ್ಚರಿಕೆ ವಹಿಸಬೇಕಿದೆ.

Please follow and like us:
error