‘’ಕರೋನಾ ವೈರಸ್ ಖಾಯಿಲೆ’’ ಭಯ ಬೇಡ ಎಚ್ಚರಿಕೆ ಇರಲಿ : ಶಿವಾನಂದ


: ‘’ಭಯ ಬೇಡ ಎಚ್ಚರಿಕೆ ಇರಲಿ’’ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಮಾ. 12 ರಂದು ಹಮ್ಮಿಕೊಂಡಿದ್ದ ‘’ಕರೋನಾ ವೈರಸ್’’ ಖಾಯಿಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರೋನಾ ವೈರಸ್ ಈಗಾಗಲೇ ಚೀನಾದಲ್ಲಿ ಅತಿ ಹೆಚ್ಚು ಜನರು ಸೋಂಕಿತರಾಗಿದ್ದು ಅದರಲ್ಲಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ರೋಗವು ಈಗ ಭಾರತ ಮತ್ತು ಕರ್ನಾಟಕ ರಾಜ್ಯಕ್ಕೂ ಹರಡಿದೆ. ಇದರ ಬಗ್ಗೆ ‘’ಭಯ ಬೇಡ ಎಚ್ಚರಿಕೆ ಇರಲಿ’’ ಎಂಬ ಸಂದೇಶದೊAದಿಗೆ ಜಿಲ್ಲೆಯಾದ್ಯಂತ ಅರಿವು ಮೂಡಿಸಲಾಗುತ್ತದೆ. ಇದು ಸೋಂಕಿತ ವ್ಯಕ್ತಿ ಕೆಮ್ಮಿದಾಗ ಮತ್ತು ಸೀನಿದಾಗ ವೈರಾಣು ಗಾಳಿ ಸೇರುತ್ತದೆ. ಈ ಸೋಂಕಿತ ಗಾಳಿಯನ್ನು ಆರೋಗ್ಯವಂತ ವ್ಯಕ್ತಿ ಉಸಿರಾಡಿದಾಗ ವೈರಾಣು ಅವರ ದೇಹ ಸೇರಿ ಖಾಯಿಲೆ ಉಂಟು ಮಾಡುತ್ತದೆ ಮತ್ತು ಸೋಂಕಿತ ವ್ಯಕ್ತಿ ಅಥವಾ ಸೋಂಕಿತ ವಸ್ತುಗಳ ನಿಕಟ ಸಂಪರ್ಕದಿAದ ಒಬ್ಬರಿಂದ ಇನ್ನೂಬ್ಬರಿಗೆ ಹರಡುತ್ತದೆ. ಹಸ್ತಲಾಗವ ಮಾಡುವದರಿಂದಲೂ ಕೂಡ ಹರಡುತ್ತದೆ. ವಿಪರಿತ ಜ್ವರ, ಗಂಟಲುನೋವು, ಉಸಿರಾಟದ ತೊಂದರೆ, ನ್ಯೂಮೋನಿಯಾ, ನಿಶ್ಯಕ್ತಿ, ಮಾಂಸ ಖಂಡಗಳ ಸೆಳೆತ, ಮೈನಡುಕ, ತಲೆನೋವು, ಕೆಮ್ಮು, ನೆಗಡಿ ಇವು ಕರೋನಾ ವೈರಸ್ ಖಾಯಿಲೆಯ ಲಕ್ಷಣಗಳಾಗಿವೆ. ಸದ್ಯ ನೋವೆಲ್ ಕರೋನಾ ವೈರಸ್ ಸೋಂಕನ್ನು Anti-Virol ಔಷದಿಗಳನ್ನು  ಬಳಸುವುದರ ಮುಖಾಂತರ ಚಿಕಿತ್ಸೆ ನೀಡಲಾಗುತ್ತದೆ. ಈ ರೊಗದ ಔಷದಿ ಶೀಘ್ರವಾಗಿ ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಇವರು ಮಾತನಾಡಿ ಕರೋನಾ ವೈರಸ್ ಖಾಯಿಲೆಯ ಮುಂಜಾಗೃತವಾಗಿ ಸೋಂಕು ಪೀಡಿತರಿಂದ ದೂರವಿರುವದು. ರೋಗಿಯನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇಡುವದು. ಟ್ರಿಪರ್ ಲೇಯರ್ ಮಾಸ್ಕ್ ಬಳಸುವುದು, ವೈಯುಕ್ತಿಕ ಸ್ವಚ್ಛತೆ ಕಾಪಾಡುವುದು, ಆಗಾಗ್ಗೆ ವಿಶೇಷವಾಗಿ ಸಾಬೂನಿನಿಂದ ಕೈ ತೊಳೆಯುವುದು, ಕೆಮ್ಮವಾಗ ಮತ್ತು ಸೀನುವಾಗ ಮಾಸ್ಕ್ ದರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಉಸಿರಾಟದ ತೊಂದರೆಯಾದರೆ ತಕ್ಷಣ ವೈದ್ಯರ ಸಲಹೆ ಪಡೆಯುವದು, ಮಾಂಸ, ಮೊಟ್ಟೆ ಇತ್ಯಾದಿ ಚನ್ನಾಗಿ ಬೇಯಿಸಿ ಉಪಯೋಗಿಸುವುದು ಎಂದು ತಿಳಿಸಿದರು. ಒಂದು ವೇಳೆ ಸಂಶಯಾಸ್ಪದ ರೋಗಿಗಳು ಕಂಡುಬAದರೆ ಜಿಲ್ಲಾ ಮತ್ತು ತಾಲೂಕ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ ತೆರೆಯಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಕಾರಾಗೃಹ ಅದೀಕ್ಷಕರು ಇಲಾಖೆ ಬಿ.ಎಂ ಕೊಟ್ರೇಶ ಇವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ನಮ್ಮ ಜೈಲಿಗೆ ಬಂದು ತಮಗೆ ಕರೋನಾ ವೈರಸ್ ಖಾಯಿಲೆ ಬಗ್ಗೆ ಮುಂಜಾಗ್ರತೆ ಬಗ್ಗೆ ಅರಿವು ಮೂಡಿಸಿದ್ದು ಬಹಳ ಉಪಯುಕ್ತವಾಗಿದೆ. ಅವರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಖೈದಿಗಳಿಗೆ ತಿಳಿಸಿದರು. ಹಿರಿಯ ಆರೋಗ್ಯ ಸಹಾಯಕ ವಿಶ್ವನಾಥ ದೀಕ್ಷಿತ ಹಾಗೂ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

Please follow and like us:
error