ಎರಡು ಆಂಬುಲೇನ್ಸಗಳನ್ನು ಆರೋಗ್ಯ ಇಲಾಖೆಗೆ ನೀಡಿದ ಶಾಸಕ ದಡೆಸೂಗೂರು

ಕನ್ನಡನೆಟ್ ನ್ಯೂಸ್ : ಕನಕಗಿರಿ ಕ್ಷೇತ್ರದ ಜನತೆಗಾಗಿ ವೈಯಕ್ತಿಕ ಖರ್ಚಿನಲ್ಲಿ ಎರಡು ಆಂಬ್ಯುಲೇನ್ಸ ವಾಹನಗಳನ್ನು ಆರೋಗ್ಯ ಇಲಾಖೆಗೆ ನೀಡಿದ ಶಾಸಕ.

ಕೊಪ್ಪಳ : ಕೊರೊನಾ ಸಂಧರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸೋ ಜನಪ್ರತಿನಿಧಿಗಳು ವಿರಳ‌.‌ಇಂತಹ ಸಂಧರ್ಭದಲ್ಲಿ ವೈಯಕ್ತಿಕವಾಗಿ ಲಕ್ಷಾಂತರ ರೂ.ಹಣ ಖರ್ಚು ಮಾಡಿ ಜನರ ಸೇವೆಗೆ ಎರಡು ಆಂಬ್ಯುಲೆನ್ಸ್ ನೀಡುವ ಮೂಲಕ ಇಲ್ಲೋರ್ವ ಬಿಜೆಪಿ ಶಾಸಕರು ಸಮಾಜಸೇವೆಗೆ ಮುಂದಾಗಿದ್ದಾರೆ. ಹೌದು ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಢೇಸೂಗೂರು ಸ್ವಂತ ಹಣದಲ್ಲಿ ಎರಡು ಆಂಬ್ಯುಲೇನ್ಸ್ ಖರೀದಿ ಮಾಡಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು. ರವಿವಾರದಂದು ಜಿಲ್ಲೆಯ ಕಾರಟಗಿ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವಾಹನ ಹಸ್ತಾಂತರಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನತೆಗೆ ಯಾವುದೇ ಕಾರಣಕ್ಕೂ ಕೊರೊನಾ ಸಂಧರ್ಭದಲ್ಲಿ ತೊಂದರೆ ಆಗಬಾರದು,ಅಲ್ಲದೇ ಸರಿಯಾದ ಸಮಯಕ್ಕೆ ಅವರಿಗೆ ಆಂಬ್ಯಲೆನ್ಸ್ ಸಿಗುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯ ಮಾಡಿದ್ದೇನೆ. ಯಾವುದೇ ಸಮಸ್ಯೆ ಇರಲಿ ನನ್ನ ಕನಕಗಿರಿ ಕ್ಷೇತ್ರದ ಜನತೆಯ ಸೇವೆಗೆ ನಾನು ಸದಾ ಸಿದ್ದ ಎಂದರು.ಈ ಸಂಧರ್ಭದಲ್ಲಿ ತಾಲೂಕು ವೈದ್ಯಾದಿಕಾರಿ ಡಾ. ರಾಘವೇಂದ್ರ, ಕಾರಟಗಿ ತಹಶಿಲ್ದಾರಾದ ಶಿವಶರಣಪ್ಪ ಕಟ್ಟೊಳ್ಳಿ, ಪುರಸಭೆ ಮುಖ್ಯ ಅಧಿಕಾರಿ ರೆಡ್ಡಿ ರಾಯನಗೌಡ, ಪಿಎಸ್ಐ ಲಕ್ಕಪ್ಪ ಅಗ್ನಿ, ಬಿಜೆಪಿ ಮುಖಂಡರಾದ ಮೋಹನರಾವ್, ವೀರೇಶ ಸಾಲೋಣಿ, ಅಮರೇಶ ಕುಳಗಿ, ಮಂಜುನಾಥ ಮಸ್ಕಿ, ಶರಣಪ್ಪ ಗದ್ದಿ, ಶಿವಶರಣೆಗೌಡರು, ಮೇಹಬೂಬ್ ಸಿದ್ದಾಪುರ, ತಿಮ್ಮನಗೌಡರು, ಗಂಗಾಧರ ಎಪಿಎಂಸಿ, ಬಸವರಾಜ ಶಿವಶಕ್ತಿ, ಮಂಜುನಾಥ ಗುಂಜಳ್ಳಿ, ವೀರಭದ್ರಗೌಡ ಮಕ್ಕಳ ತಜ್ಞರು, ಶಶಿ ಮೇದಾರ್, ಮಂಜುನಾಥ ನಾಯಕ ಮಾಧ್ಯಮ ಸಲಹೆಗಾರ ಸತ್ಯನಾರಾಯಣ ಕುಲಕರ್ಣಿ, ಸಂಚಾಲಕರಾದ ಭೀಮೇಶ ಸೇರಿದಂತೆ ಮತ್ತಿತರರು ಇದ್ದರು.

Please follow and like us:
error