ಆರೋಗ್ಯವಂತ ಸಮಾಜಕ್ಕೆ ಜಂತು ನಿವಾಹರಣೆ ಅತ್ಯವಶ್ಯಕ : ಡಾ. ಅಲಕನಂದಾ ಮಳಗಿ

ಕೊಪ್ಪಳ ಫೆ. ): ಆರೋಗ್ಯವಂತ ಸಮಾಜಕ್ಕೆ ಜಂತು ನಿವಾಹರಣೆ ಅತ್ಯವಶ್ಯಕ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಟನಕನಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪ್ರಾ.ಆ.ಕೇಂದ್ರ ಕಿನ್ನಾಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ”ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” ನಿಮಿತ್ಯ ಟನಕನಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಜಂತು ನಿವಾರಕ ಮಾತ್ರೆ ನೀಡಿ ಅವರು ಮಾತಾನಾಡಿದರು.
ಜಿಲ್ಲೆಯ ವಿವಿಧ ತಾಲೂಕಗಳ ಎಲ್ಲಾ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ, ಅಂಗನವಾಡಿ ಕೇಂದ್ರ, ವಸತಿ ಶಾಲೆಯಲ್ಲಿ ಓದುತ್ತಿರುವ ೦೧ ರಿಂದ ೧೯ ವರ್ಷದೊಳಗಿನ ಎಲ್ಲಾ ಮಕ್ಕಳಗೂ ಜಂತು ನಿವಾರಕ ಮಾತ್ರೆ ತೆಗೆದುಕೊಳ್ಳುವ ಕಾರ್ಯಕ್ರಮವನ್ನು ಇಂದು ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ವರ್ಷದಲ್ಲಿ ೦೨ ಬಾರಿ ನಡೆಸಲಾಗುತ್ತದೆ. ಜಂತುಹುಳ ಸೊಂಕಿನಿಂದಾಗಿ ರಕ್ತ ಹೀನತೆ, ಪೌಷ್ಠಿಕಾಂಶ ಕೊರತೆ, ಹಸಿವು ಆಗದೇ ಇರುವುದು, ನಿಶ್ಯಕ್ತಿ ಮತ್ತು ಆತಂಕ, ಹೊಟ್ಟೆ ನೋವು, ವಾಕರಿಕೆ, ಅತಿಸಾರ, ವಾಂತಿ, ತೂಕ ಕಡಿಮೆಯಾಗುವುದು ಇಂತಹ ಸಮಸ್ಯೆಗಳು ಜಂತುಹುಳ ಬಾದೆಯ ಲಕ್ಷಣಗಳಾಗಿದ್ದು ಪಾಲಕರು ಮತ್ತು ಇಲಾಖೆಗಳು ಹೆಚ್ಚು ಮುತುವರ್ಜಿವಹಿಸಿ ಮಕ್ಕಳ ಆರೋಗ್ಯ್ಗ ಜಂತು ನಿವಾರಕ ಮಾತ್ರೆ ತೆಗೆದುಕೊಳ್ಳವ ಬಗ್ಗೆ ಸಹಕರಿಸಬೇಕು. ಜಂತುಹುಳ ಸೊಂಕುಗಳ ನಿವಾರಣೆಗಾಗಿ ನಮ್ಮ ಜಿಲ್ಲೆಯಲ್ಲಿ ೧ ರಿಂದ ೧೯ ವರ್ಷದೊಳಗಿನ ೫,೬೨,೩೫೨ ಮಕ್ಕಳಿಗೆ ಮಾತ್ರೆ ನೀಡುವ ಗುರಿ ಹೊಂದಿದ್ದು, ಎಲ್ಲಾ ಪಾಲಕರು ಈ ಕಾರ್ಯಕ್ರಮದ ಬಗ್ಗೆ ಆಸಕ್ತಿ ವಹಿಸಿ ಮಾತ್ರೆ ತೆಗೆದುಕೊಂಡ ಬಗ್ಗೆ ವಿಚಾರಿಸಬೇಕು. ”ಮಕ್ಕಳು ಸಮಾಜದ ಆಸ್ತಿ” ಅವರ ಆರೋಗ್ಯ ಕಾಪಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ‘ಆರೋಗ್ಯ ವಂತ ಸಮಾಜ ನಿರ್ಮಾಣ” ಮಾಡಲು ಸಹಕರಿಸಿ. ಎಲ್ಲರೂ ಶುದ್ದವಾದ ನೀರು ಕುಡಿಯಬೇಕು, ಸ್ವಚ್ಛವಾಗಿ ಕೈತೊಳೆದುಕೊಳ್ಳಬೇಕು, ಊಟಕ್ಕೆ ಮೊದಲು ಶೌಚಾಲಯ ಉಪಯೋಗಿಸಿದ ನಂತರ ಕಡ್ಡಾಯವಾಗಿ ಸೋಪು ಬಳಸಿ ಕೈತೊಳೆದುಕೊಳ್ಳಬೇಕು ಮತ್ತು ವೈಯುಕ್ತಿಕ ಸ್ವಚ್ಛತೆ ಕಾಪಾಡಬೇಕು. ಹದೆ-ಹರೆಯದವರಿಗೆ ಆರೋಗ್ಯದಲ್ಲಿ ತೊಂದರೆ ಇದ್ದರೆ ಪ್ರತಿ ಗುರುವಾರ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಧ್ಯಾಹ್ನ ೦೩ ರಿಂದ ೦೫ ರವರೆಗೆ ”ಸ್ನೇಹ ಕ್ಲಿನಿಕ್”ನಲ್ಲಿ ಚಿಕಿತ್ಸೆ ಪಡೆದುಕೊಳ್ಳವಂತೆ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಉಮಾದೇವಿ ಸೊನ್ನದ ಅವರು ಮಾತನಾಡಿ, ಇಂದು ರಾಷ್ಟದ್ಯಾಂತ ಈ ”ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದು, ಬಹಳ ಮಹತ್ವ ಪೂರ್ಣ ಕಾರ್ಯಕ್ರಮ ಇದಾಗಿದೆ. ಮಕ್ಕಳ ಹೊಟ್ಟೆ ನೋವಿನಿಂದಾಗಿ ಹಾಜರಾತಿ ಸಂಖ್ಯೆ ಕಡಿಮೆಯಾಗಿ ಶಿಕ್ಷಣ ಪಡೆಯುವಲ್ಲಿ ಹಿಂದೆಟು ಹಾಕುತ್ತಾರೆ. ಇದಕ್ಕೆ ಪರಿಹಾರವಾಗಿ ಜಂತು ನಿವಾರಕ ಮಾತ್ರೆ ನೀಡುವುದು ಬಹಳ ಉತ್ತಮ ಕೆಲಸವಾಗಿದೆ. ಆದ್ದರಿಂದ ಎಲ್ಲಾ ಮಕ್ಕಳು ಜಂತು ನಿವಾರಕ ಮಾತ್ರೆ ತೆಗೆದುಕೊಂಡು ಆರೋಗ್ಯ ವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ದೇಶದ ಹಲವು ಸಂಪತ್ತುಗಳಲ್ಲಿ ಮಾನವ ಸಂಪತ್ತು ಕೂಡ ಒಂದು. ಅದರಲ್ಲಿ ವಿಶೇಷವಾಗಿ ಹದೆ-ಹರೆಯದವರ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ ಅವರ ಆರೋಗ್ಯ ಕಾಪಡುವುದು ಮುಖ್ಯವಾಗಿದೆ. ರಕ್ತಹೀನತೆ, ಅಪೌಷ್ಠಿಕತೆ, ನಿಶಕ್ತಿ ಇವುಗಳನ್ನು ತಡೆಗಟ್ಟಲು ಮುಖ್ಯವಾಗಿ ಈದಿನದ ಕಾರ್ಯಕ್ರಮ ”ಅಲ್ಬನ್‌ಡೋಜಲ್ ಮಾತ್ರೆ” ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲರ ಮಕ್ಕಳು ಆರೋಗ್ಯವಂತವಾಗಿರಬೇಕಾದರೆ ಈ ಮಾತ್ರೆಯನ್ನು ಕಡ್ಡಾಯವಾಗಿ ಪ್ರತಿ ೦೬ ತಿಂಗಳಿಗೆ ಒಮ್ಮೆ ತೆಗೆದುಕೊಳ್ಳುವಂತಾಗಬೇಕು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟನಕನಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಅವರು ವಹಿಸಿದ್ದರು. ಕಿನ್ನಾಳ ಪ್ರಾ.ಆ. ಕೇಂದ್ರ ವೈದ್ಯಾಧಿಕಾರಿ ಡಾ. ಅಂಜುಮ್ ಪರ್ವಿನ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ತಾಲೂಕಾ ಶಿಶು ಅಬಿವೃದ್ಧಿ ಯೋಜನಾ ಅಧಿಕಾರಿ ಸಿಂದೂ ಎಲಿಗಾರ, ಹಿ.ಆ.ಸ. ಸರೋಜ ಬಡಿಗೇರ, ಸಿದ್ದಲಿಂಗಮ್ಮ, ಕಿ.ಆ.ಸ. ವಂದನಾ, ಕ್ಷೇ.ಆ.ಶಿ.ಅ. ಗಂಗಮ್ಮ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮೃತುಂಜಯ, ಜಿಲ್ಲಾ ಆಶಾ ಮೇಲ್ವಿಚಾರಕಿ ಶಿಲ್ಪಾ, ತಾಲೂಕಾ ಆಶಾ ಮೇಲ್ವಿಚಾರಕಿ ಸಂದ್ಯಾ, ಐ.ಎಫ್.ವಿ. ಜೈಹಿಂದ್, ಶಾಲಾ ಸಹ-ಶಿಕ್ಷಕರಾದ ಸಿದ್ದಲಿಂಗಯ್ಯ, ಮೌನೇಶ, ವೆಂಕಟೇಶ ಸೇರಿದಂತೆ ಶಾಲಾ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು