ಸೂಫಿ ಸಂಜೆಯಲ್ಲಿ ಮಿಂದೆದ್ದೆ ಮೇ ಸಾಹಿತ್ಯ ಮೇಳ

ಆದ್ಯಾತ್ಮ ಅನುಭಾವ, ಪ್ರೀತಿಗಳ ಸಂಕರದಂತಿದ್ದ ಗಾಯನಕ್ಕೆ ಮೇ ಸಾಹಿತ್ಯ ಮೇಳವೇ ಶರಣೇ ಎಂದಿತು.
ಮೇ ಸಾಹಿತ್ಯ ಮೇಳದ ಮೊದಲ ದಿನದ ಸಂಕೆ ಸೂಫಿ ಗಾಯನ ಮುಖ್ತಿಯಾರ್ ಅಲಿ ಮತ್ತು ಅವರ ತಂಡ ಸಂಗೀತದೊಂದಿಗೆ ಪ್ರೀತಿಯನ್ನು ಹರಡಿ ಪ್ರೇಕ್ಷಕರನ್ನು ಮಂತ್ರ ಮುಗ್ಧರಾಣಿಸಿತು. “ ಹರಿ ಜಂ” ಗಾಯನದಿಂದ ತಣಗೆ ಶುರುವಾದ ಮುಖ್ತಿಯಾರ್ ಧ್ವನಿಯೇರಿಸಿ ಹಾವಭಾವಗಳೊಂದಿಗೆ ತಾರಕಕ್ಕೆ ತಲುಪುತ್ತ ಮತ್ತು ತಣ್ಣಗಿನ ಭಾವಕ್ಕೆ ಇಳಿಯುತ್ತ ಎಲ್ಲರೂ ತಲೆದೂಗುವಂತೆ ಮಾದಿದರು.
ಅವರ ಮೋಹಕ ಧ್ವನಿಯ ಏರಿಳಿತ ತಕಲತೆ ಹಾರ್ಮೊನಿಯಂ ಮತ್ತು ತಬಲಗಳು ಹೊಮ್ಮಿಸಿದ ಹಿತಕರ ಸಂಗೀತ ಇಡೀ ಸಭಾಂಗಣದಲ್ಲಿ ಸಂಚಲನ ಮೂಡುಸುತು.
ಕಬೀರರ ಮಾನವ ಪ್ರೀತಿಯ ಸಾಹಿತ್ಯವನ್ನು ಅಂತ:ಕರಣದ ಪ್ರೀತಿಯ ಹಾಡಿನ ಮೂಲಕ ಜನರೆದುರು ಮುಖ್ತಿಯಾರ್ ತೆರದಿಟ್ಟರು. ಸುಮಾರು ಹೊತ್ತಿನವರಿಗೂ ಈ ಗಾನಸುದೆ ಸಭಾಂಗಣದ ತುಂಬ ಪ್ರೀತಿಯ ಸಹಬಾಳ್ವೆಯ ತರಂಗಗನ್ನು ಹೊಮ್ಮಿಸಿತು.
ಪ್ರೇಕ್ಷಕರು ಸೂಫಿ ಗುಂಗುನಲ್ಲೇ ತನ್ನಯರಾಗಿ ಆಲಿಸುತ್ತ ಮುಖ್ತಿಯಾರ್ ಗಾಯನವನ್ನು ಮನದುಂಬಿಕೊಂಡರು. ಹಾಡುಗಳ ನಡುನಡುವೆ ಮೂಖ್ತಿಯಾರ್ ಜೀವಪ್ರೀತಿಯ ಸೆಲೆಗಳ ಮಾತುಗಳನ್ನು ಆಡುತ್ತ ಹೋದರು.
ಹಾಡಿನ ಹಿಂದೆ ಹಾಡು ಹರಿದು ಬಂದಂತೆ ಒಂಥರಾ ಹುಚ್ಚು ಹಿಡಿದು ಗುಂಗು ಆವರಿಸಿದ ಭಾವ ಸಭೆಯಲ್ಲಿ ಗುನಗುನಿಸುತ್ತಿತ್ತು.

Please follow and like us:
error