ಸಿನೆಮಾ ರಂಗದಲ್ಲಿ ವರ್ಲ್ಡ್ ಗಿನ್ನಿಸ್ ದಾಖಲೆ ಮಾಡಿದ ತೆಲುಗು ಹಾಸ್ಯ ನಟ.

ಭಾರತ ಸಿನೆಮಾ bbbರಂಗದ ಪ್ರಮುಖ ಹಾಸ್ಯನಟ ಬ್ರಹ್ಮಾನಂದಮ್ ಒಂದು ಸಾವಿರ ಸಿನೆಮಾಗಳಲ್ಲಿ ಅಭಿನಯಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಾಸ್ಯನಟ 2015ರಲ್ಲಿ ತನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಬಾರಿ – 1,000 ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವರ್ಲ್ಡ್ ಗಿನ್ನಿಸ್ ರೆಕಾರ್ಡ್ ನಿರ್ಮಿಸಿದ್ದಾರೆ. .. 2014ರಲ್ಲಿ ಪುನೀತ್ ರಾಜ್’ಕುಮಾರ್ ಅಭಿನಯದಲ್ಲಿ ತೆರೆಕಂಡ ”ನಿನ್ನಿಂದಲೇ” ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ  ಪಾದಾರ್ಪಣೆ ಮಾಡಿದ್ದಾರೆ….ಬ್ರಹ್ಮಾನಂದಮ್ 2009ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಸೇವಾ ಪ್ರಶಸ್ತಿಯಾದ ಪದ್ಮ ಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Leave a Reply