ಶೀಘ್ರದಲ್ಲೇ ಖಂಡಾಂತರ ಕ್ಷಿಪಣಿ ಪರೀಕ್ಷೆ : ಉತ್ತರ ಕೊರಿಯ ಅಧ್ಯಕ್ಷ ಕಿಮ್‌ಜೊಂಗ್ ಘೋಷಣೆ

ಸಿಯೋಲ್, ಜ.1: ಉತ್ತರ ಕೊರಿಯವು ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ kimjongಅಂತಿಮ ಹಂತದಲ್ಲಿದೆಯೆಂದು ಅದರ ಸರ್ವೋಚ್ಚ ನಾಯಕ ಕಿಮ್ ಜೊಂಗ್ ಉನ್ ರವಿವಾರ ಘೋಷಿಸಿದ್ದಾರೆ. ಕಳೆದ ವರ್ಷ ದೇಶವು ತನ್ನ ಅಣ್ವಸ್ತ್ರ ಪ್ರತಿರೋಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆಯೆಂದು ಅವರು ಹೇಳಿದ್ದಾರೆ.

 ಹೊಸ ವರ್ಷಾಚರಣೆ ಪ್ರಯುಕ್ತ ಅವರು ಟಿವಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ 30 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ ಅವರು ಕಳೆದ ವರ್ಷ ಉ.ಕೊರಿಯ ನಡೆಸಿದ ಸರಣಿ ಅಣ್ವಸ್ತ್ರ ಹಾಗೂ ಕ್ಷಿಪಣಿ ಪರೀಕ್ಷೆಗಳ ಬಗ್ಗೆ ಪ್ರಜೆಗಳ ಗಮನಸೆಳೆದರು. ಉತ್ತರ ಕೊರಿಯದ ಖಂಡಾಂತರ ಪ್ರಕ್ಷೇಪ ಕ್ಷಿಪಣಿಯ ಪ್ರಾಯೋಗಿಕಪರೀಕ್ಷೆಯ ಅಂತಿಮಹಂತದಲ್ಲಿರುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು.

 ವ್ಯೊಂಗ್‌ಯಾಂಗ್ ಅಣ್ವಸ್ತ್ರ ಶಕ್ತಿಯಾಗಿ ಬೆಳೆದಿದ್ದು, ಇದೀಗ ಅದೊಂದು ಪ್ರಬಲ ಪೌರ್ವಾತ್ಯ ಮಿಲಿಟರಿ ಶಕ್ತಿಯಾಗಿದೆ. ಅತ್ಯಂತ ಬಲಿಷ್ಠ ವೈರಿಗೂ ಕೂಡಾ ಅದನ್ನು ಮುಟ್ಟಲು ಸಾಧ್ಯವಿಲ್ಲವೆಂದವರು ಹೇಳಿದ್ದಾರೆ. ಪರಮಾಣು ಸಿಡಿತಲೆಯೊಂದಿಗೆ ಅಮೆರಿಕದ ಮೇಲೂ ದಾಳಿ ನಡೆಸಲು ಸಾಧ್ಯವಾಗುವಂತಹ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ತನ್ನ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಉತ್ತರ ಕೊರಿಯ ಕಳೆದ ವರ್ಷ ಎರಡು ಪರಮಾಣು ಪರೀಕ್ಷೆಗಳನ್ನು ಹಾಗೂ ಹಲವಾರು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ.

Leave a Reply