ವಿಶ್ವಪಾರಂಪರಿಕ ತಾಣಗಳಲ್ಲಿ ಯುನೆಸ್ಕೋ ಭಾರತದ ಮೂರು ಸ್ಥಳಗಳನ್ನು ಹೊಸದಾಗಿ ಸೇರಿಸಿದೆ.

ವಿಶ್ವಪಾರಂಪರಿಕ ತಾಣಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿರುವ ಯುನೆಸ್ಕೋ ಭಾರತದ ಮೂರು ಸ್ಥಳಗಳನ್ನು ಈ ಸಾಲಿಗೆ ಸೇರಿಸಿದೆ.

nalandaಹೊಸದಾಗಿ ಸೇರ್ಪಡೆಗೊಂಡ ಸ್ಥಳಗಳ ಪರಿಚಯ:

ಚಂಡೀಗಡದ ಕ್ಯಾಪಿಟಲ್ ಕಾಂಪ್ಲೆಕ್ಸ್: ಫ್ರೆಂಚ್ ವಾಸ್ತುಶಿಲ್ಪಿ ವಿನ್ಯಾಸಗೊಳಿಸಿದ ೧೭ ಕಟ್ಟಡಗಳ ಸಮೂಹ ಇದರ ವಿಶೇಷತೆ.

ಸಿಕ್ಕಿಂ ರಾಷ್ಟ್ರೀಯ ಉದ್ಯಾನವನ : ವಿಶ್ವದ ಮೂರನೇ ಅತೀ ಎತ್ತರದ ಶಿಖರ ಖಂಗಚೆಂದ್‌ಜೊಂಗ ಎಂಬ ಖ್ಯಾತಿ ಗಳಿಸಿದೆ. ಹಿಮಾಲಯದ ಹೃದಯ ಭಾಗದಲ್ಲಿ ಈ ಸ್ಥಳವಿದೆ. ಕೆರೆಗಳು, ಕಣಿವೆಗಳು, ಹಿಮನದಿಗಳು ಹಾಗೂ ಸಾಕಷ್ಟು ಅದ್ಭುತಗಳಿಂದ ತುಂಬಿದೆ. ಪುರಾತನ ಕಾಡು ಉದ್ಯಾನವನ್ನು ಆವರಿಸಿದೆ.

ನಳಂದಾ ವಿಶ್ವವಿದ್ಯಾಲಯ: ಪಟನಾದಿಂದ ೯೫ ಕಿ.ಮೀ ಅಂತರದಲ್ಲಿದೆ.ಪುರಾತನ ನಳಂದಾ ವಿಶ್ವವಿದ್ಯಾಲಯವನ್ನು ೫ರಿಂದ ೧೨೦೦ ಕ್ರಿ.ಪೂದಲ್ಲಿ ಕಲಿಕೆಯ ಪ್ರಮುಖ ತಾಣವನ್ನಾಗಿ ಮಾಡುವಲ್ಲಿ ಮಹಾವೀರ ಹಾಗೂ ಬೌದ್ಧ ಧರ್ಮಗುರುಗಳು ಪ್ರಮುಖ ಪಾತ್ರ ವಹಿಸಿದ್ದರು.

Please follow and like us:
error