ರಾಜಕೀಯ ವಿಶ್ಲೇಷಕ, ಜಯಲಲಿತಾ ಆಪ್ತ ಚೋ ರಾಮಸ್ವಾಮಿ ಇನ್ನಿಲ್ಲ

cho_ramasamy-no_moreಚೆನ್ನೈ, ಡಿ.7: ಖ್ಯಾತ ರಾಜಕೀಯ ವಿಶ್ಲೇಷಕ ಹಾಗೂ ಮಾಜಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬಹಳ ಕಾಲದ ಸಮೀಪವರ್ತಿಯಾಗಿದ್ದ ಚೋ ರಾಮಸ್ವಾಮಿ ನಗರದ ಅಪೋಲೋ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. 82 ವರ್ಷದ  ರಾಮಸ್ವಾಮಿಯವರಿಗೆ ಎದೆ ನೋವು ಕಾಣಿಸಿಕೊಂಡ ನಂತರ ಅವರನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚೋ ಎಂದೇ ಜನಪ್ರಿಯರಾಗಿದ್ದ  ಅವರು  ಕಳೆದ ವರ್ಷ ಅಸ್ವಸ್ಥರಾಗಿದ್ದಾಗ ಅವರ ಆರೋಗ್ಯ ವಿಚಾರಿಸಲ ಜಯಲಲಿತಾ ಆಸ್ಪತ್ರೆಗೆ ಆಗಮಿಸಿ ಅವರು ಬೇಗ ಗುಣಮುಖರಾಗಲೆಂದು ಹಾರೈಸಿದ್ದರು.

ಚೋ ಅವರಿಗೆ ಜಯಲಲಿತಾರ ಪರಿಚಯ ಅವರು ಬಾಲಕಿಯಾಗಿದ್ದಾಗಿನಿಂದ ಇತ್ತು. ಚೋ ಅವರ ತುಘ್ಲಕ್ ಮ್ಯಾಗಝಿನ್ ಗೆ ಜಯಲಲಿತಾ ಕೆಲವು ಅಂಕಣಗಳನ್ನೂ ಬರೆದಿದ್ದರು. ಜಯಲಲಿತಾ ಅವರ ನಂಬಿಕಸ್ಥ ಸಲಹೆಗಾರರಾಗಿದ್ದರು ಚೋ. ಇಬ್ಬರೂ  ಕೆ ಕರುಣಾನಿಧಿಯವರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಯೋಚಿಸುವಲ್ಲಿ ಸಮಾನ ಚಿಂತನೆ ಹೊಂದಿದ್ದರು.

ಜಯಲಲಿತಾ ರಾಜಕೀಯದಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಿಸಿದಾಗಲೆಲ್ಲಾ ಚೋ ಅವರಿಗೆ ಸೂಕ್ತ ಸಲಹೆ ನೀಡುತ್ತಿದ್ದರು ಹಾಗೂ  ಎಐಡಿಎಂಕೆ ಇತರ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಶ್ರಮಿಸಿದ್ದರು.

ಜಯಲಲಿತಾ ಅವರ ಎಷ್ಟೇ ಆಪ್ತರಾಗಿದ್ದರೂ ಅಗತ್ಯ ಬಿದ್ದರೆ ಅವರನ್ನು ಟೀಕಿಸಲು ಚೋ ಹಿಂದೆ ಮುಂದೆ ನೋಡುತ್ತಿರಲಿಲ್ಲ

Please follow and like us:
error