ಮೇರಿಲ್ಯಾಂಡ್ ನಲ್ಲಿ ಶೂಟೌಟ್: ಮೂವರು ಮೃತ್ಯು

ಎಡ್ಜ್ ವುಡ್, ಅ.18: ಇಲ್ಲಿನ ಈಶಾನ್ಯ ಭಾಗದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು ಇಬ್ಬರು ಗಾಯಗೊಂಡಿರುವುದಾಗಿ ಮೇರಿಲ್ಯಾಂಡ್ ನ ಶೆರಿಫ್ ಮಾಹಿತಿ ನೀಡಿದ್ದಾರೆ. 

ಈಗಾಗಲೇ ಹಾರ್ಫೋರ್ಡ್ ಕೌಂಟಿ ಶೆರಿಫ್ ಜೆಫ್ರೀ ಗ್ಯಾಲೆರ್ ದಾಳಿಕೋರನನ್ನು ಗುರುತಿಸಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಶಂಕಿತ ದಾಳಿಕೋರ ಹಾಗು ಸಂತ್ರಸ್ತರು ಎಡ್ಜ್ ವುಡ್ ನ ಎಮ್ಮೋರ್ಟನ್ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಕಂಪೆನಿಯೊಂದಕ್ಕೆ ಸೇರಿದ್ದಾರೆ ಎನ್ನಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಶಾಲೆಗಳನ್ನು ಮುಚ್ಚಲಾಗಿದೆ

Please follow and like us:
error