ಭಾರತ ತನ್ನ ವಿಚಾರಗಳನ್ನು ಯಾರೊಬ್ಬರ ಮೇಲೂ ಹೇರದು: ಮೋದಿ

modi-mkb-manki-baatಮೌಂಟ್ ಅಬು(ರಾಜಸ್ತಾನ), ಮಾ.26: ಭಾರತವು ತನ್ನ ಅಭಿಪ್ರಾಯ ಮತ್ತು ವಿಚಾರಗಳನ್ನು ಇತರರ ಮೇಲೆ ಎಂದಿಗೂ ಹೇರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬ್ರಹ್ಮಕುಮಾರೀಸ್ ಸಂಘಟನೆ ಆಯೋಜಿಸಿದ್ದ ಧಾರ್ಮಿಕ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಪ್ರಧಾನಿ, ದೇವರು ಒಬ್ಬರೇ ಎಂಬುದು ಭಾರತೀಯ ಪರಂಪರೆಯ ಪ್ರಧಾನ ಅಂಶವಾಗಿದೆ ಎಂದರು. ಈ ದೇಶದಲ್ಲಿ ಹಿಂದೂ, ಮುಸ್ಲಿಂ ಅಥವಾ ಪಾರ್ಸಿ- ಎಲ್ಲರಿಗೂ ದೇವರು ಒಬ್ಬನೇ . ಆದರೆ ದೇವರನ್ನು ಆರಾಧಿಸುವ ಕ್ರಮದಲ್ಲಿ ವಿಭಿನ್ನತೆ ಇರಬಹುದು ಎಂದವರು ಹೇಳಿದರು.

            ತನ್ನ ಅಭಿಪ್ರಾಯವನ್ನು ಇತರರ ಮೇಲೆ ಹೇರಬಾರದು ಎಂಬುದು ಭಾರತದ ನಿಲುವಾಗಿದೆ. ಜ್ಞಾನಕ್ಕೆ ಮಿತಿಯಿಲ್ಲ, ಇದಕ್ಕೆ ಸಮಯದ ಅಥವಾ ಇತರ ಕಟ್ಟುಪಾಡಿಲ್ಲ, ವಿಸಾ ಅಥವಾ ಪಾಸ್‌ಪೋರ್ಟ್‌ನ ಅಗತ್ಯವಿಲ್ಲ ಎಂಬ ಭಾವನೆಯನ್ನು ಭಾರತೀಯರು ಹೊಂದಿದ್ದಾರೆ ಎಂದು ಪ್ರಧಾನಿ ನುಡಿದರು. ಪಾರಂಪರಿಕವಾಗಿ ಭಾರತೀಯರು ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದ ಪ್ರಧಾನಿ, ತಮ್ಮ ಸರಕಾರವು ಸೋಲಾರ್ ಶಕ್ತಿಗಳಂತಹ ನವೀಕರಿಸಬಲ್ಲ ಇಂಧನ ಮೂಲಗಳ ಬಳಕೆಯತ್ತ ಹೆಚ್ಚು ಒತ್ತು ನೀಡಿದೆ ಎಂದರು. ಜಾಗತಿಕ ತಾಪಮಾನದ ಏರಿಕೆ ಒಂದು ಬಹುದೊಡ್ಡ ಸವಾಲು ಎಂದ ಅವರು, 2030ರ ವೇಳೆಗೆ ದೇಶದಲ್ಲಿ ಅಸಾಂಪ್ರದಾಯಿಕ ಮೂಲಗಳಿಂದ ಉತ್ಪಾದಿಸುವ ಇಂಧನದ ಪ್ರಮಾಣ ಶೇ.40ರಷ್ಟು ಇರಲಿದೆ ಎಂದರು. 2020ರ ವೇಳೆ ನವೀಕರಿಸಬಹುದಾದ ಮೂಲಗಳಿಂದ ಪಡೆಯುವ ಇಂಧನದ ಪ್ರಮಾಣ 175 ಗಿಗಾ ವ್ಯಾಟ್ಸ್ ಆಗಿರುತ್ತದೆ ಎಂದ ಅವರು, ಭಾರತವು ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದಿಸಿದಷ್ಟೂ ವಿಶ್ವಕ್ಕೆ ಪ್ರಯೋಜನವಿದೆ ಎಂದು ನುಡಿದರು.

Please follow and like us:
error

Related posts

Leave a Comment