You are here
Home > ಅಂತರಾಷ್ಟ್ರೀಯ > ಭಾರತ ಕಿರಿಯ ಪುರುಷರ ಸೈಕ್ಲಿಂಗ್‌ ನಲ್ಲಿ ನಂ.1

ಭಾರತ ಕಿರಿಯ ಪುರುಷರ ಸೈಕ್ಲಿಂಗ್‌ ನಲ್ಲಿ ನಂ.1

ಭಾರತ ಕಿರಿಯ ಪುರುಷರ ಸೈಕ್ಲಿಂಗ್‌ ತಂಡ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯುನಿಯನ್‌ ಸೈಕ್ಲಿಸ್ಟ್‌ (ಯುಸಿಐ)ನ ಸ್ಟ್ರಿಂಟ್‌ ತಂಡದ ವಿಭಾಗದಲ್ಲಿ ನಂ.1 ಸ್ಥಾನ ಪಡೆದಿದೆ. ಇದರೊಂದಿಗೆ ಭಾರತ ಕಿರಿಯರ ತಂಡ ಅಭೂತಪೂರ್ವ ಸಾಧನೆಯೊಂದನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಾರದಲ್ಲಿ ರಾರ‍ಯಂಕಿಂಗ್‌ನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ರಾರ‍ಯಂಕಿಂಗ್‌ನ್ನು ಉನ್ನತೀಕರಿಸಲಾಗುತ್ತದೆ. ಭಾರತ ಕಿರಿಯರ ತಂಡ ಈ ಹಿಂದೆ 11ನೇ ಸ್ಥಾನ ಪಡೆದಿತ್ತು. ಭಾರತ ಸೈಕ್ಲಿಂಗ್‌ ತಂಡ 1012.5 ಅಂಕಗಳಿಸಿ cycleಅಗ್ರಸ್ಥಾನ ಕಾಯ್ದುಕೊಂಡಿದೆ. ಪೋಲೆಂಡ್‌ 960 ಅಂಕ ಪಡೆದು 2ನೇ ಸ್ಥಾನಗಳಿಸಿದರೆ, ಕೊರಿಯಾ 900 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Leave a Reply

Top