ಭರ್ಮಾ ದೇಶದ ರೂಹಿಂಗ್ಯಾ ಮುಸ್ಲಿಮರ ಮೇಲೆ ನರಹತ್ಯೆ ಖಂಡಿಸಿ ಮನವಿ.

ಭರ್ಮಾ ದೇಶದ ರೂಹಿಂಗ್ಯಾ ಮುಸ್ಲಿಮರ ಮೇಲೆ ನರಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲಾ ಜಮಿಯತ್ ಉಲ್ಮಾ ವತಿಯಿಂದ ಖಂಡಿಸಿ ಮನವಿ.

ಕೊಪ್ಪಳ:27, ಭರ್ಮಾ ದೇಶ ರೂಹಿಂಗ್ಯಾ ಮುಸ್ಲಿಮರ ಮೇಲೆ ನರಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲಾ ಜಮಿಯತ್ ಉಲ್ಮಾ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಕಾರ್ಯದರ್ಶಿಗಳು ಯುನೈಟೆಡ್ ನೇಷನ್ ಆಫ್ ಅಮೇರಿಕಾ, ಅಂಬೇಸಿ ಮ್ಯಾನಮಾರ್ ನ್ಯೂ ದೆಹಲಿ ಹಾಘೂ ಮಾನ್ಯ ಗೃಹ ಮಂತ್ರಿಗಳು ಭಾರತ ಸರಕಾರ ಇವರುಗಳಿಗೆ ಅಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಆ ದೇಶದಲ್ಲಿ ಶಾಂತಿ ನೆಲೆಸುವುದು, ಮತ್ತು ಅವರ ಹಕ್ಕುಗಳನ್ನು ಅವರಿಗೆ ಕೊಟ್ಟು, ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳನ್ನು ಭೇಟಿಯಾಗಲು ಹೋದರೆ ಅವರನ್ನೂ ಸಹ ಅವರ ದೇಶದ ಒಳಕ್ಕೆ ಬಿಡುತ್ತಿಲ್ಲ. ಪ್ರಾಣ ಭೀತಿಯಿಂದ ವಲಸೆ ಬಂದ ವ್ಯಕ್ತಿಗಳಿಗ ಭಾರತ ಮತ್ತು ಬಾಂಗ್ಲಾದೇಶದವರು ರಕ್ಷಣೆ ನೀಡಿ, ಆದೇಶದಲ್ಲಿ ಶಾಂತಿ ನೆಲೆಸುವವರೆಗೂ ಅವರನ್ನು ಎಲ್ಲಾ ರೀತಿಯಿಂದ ಸಹಾಯ ಮಾಡಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮುಸ್ತಿ ಅಫ್ಜಲ್ ಹುಸೇನ್ ರಶಾದಿ, ಜಿಲ್ಲಾ ಉಪಾಧ್ಯಕ್ಷರು ಯುಸೂಫ್ ಬೇಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹಮ್ಮದ, ಜಿಲ್ಲಾ ಜಂಟಿ ಕಾರ್ಯದರ್ಶಿ ನದೀಮ್ ಅಹೆಮ್ಮದ್, ತಾಲೂಕಾ ಜಂಟಿ ಕಾರ್ಯದರ್ಶಿ ಗಂಗಾವತಿ ಇಲಿಯಾಸ್, ತಾಲೂಕಾ ಕಾರ್ಯದರ್ಶಿ ಗಂಗಾವತಿ ಆಶೀಪ್ ಅಹೆಮ್ಮದ್, ಅಧ್ಯಕ್ಷರು ಕೊಪ್ಪಳ ಅಬ್ದುಲ್ ಮುನಾಫ್, ಉಪಾಧ್ಯಕ್ಷರು ಕೊಪ್ಪಳ ಸೈಯ್ಯದ್ ಖಾಜಾ ಮೈನುದ್ದಿನ್ ಖಾದ್ರಿ (ಜಮೀರ), ಕಾರ್ಯದರ್ಶಿ ಕೊಪ್ಪಳ ಇಸಾಕ್ ಇನ್ನೂ ಮುಂತಾದವರು ಭಾಗವಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

Please follow and like us:
error