ಬ್ರೇಕಿಂಗ್ ನ್ಯೂಸ್ ಮುಂದಿನ ವರ್ಷದ ಐಪಿಎಲ್ ಸರಣಿ ಭಾರತದಲ್ಲಿ ನಡೆಯಲ್ಲ..?

ಇಂಡಿಯನ್ ಪ್ರೀಮಿಯರ್ ಲೀಗ್images ಇತ್ತೀಚೆಗೆ ವಿವಾದಗಳಿಂದಲೇ ಭಾರೀ ಸುದ್ದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಸರಣಿಯನ್ನ ವಿದೇಶದಲ್ಲಿ ನಡೆಸಲು ಇಂಡಿಯನ್ ಪ್ರೀಮಿಯರ್ ಲೀಗ್`ನ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ಧಾರೆ. ಈ ವರ್ಷ ದೇಶದ ಬರದ ಬರ ಸಿಡಿಲು ಐಪಿಎಲ್`ಗೆ ತಟ್ಟಿದೆ. ಐಪಿಎಲ್ ಪಂದ್ಯಗಳಿಗಾಗಿ ಲಕ್ಷ ಲಕ್ಷ ಲೀಟರ್ ನೀರನ್ನ ಬಳಸುವುದನ್ನ ವಿರೋಧಿಸಿ ಮಹಾರಾಷ್ಟ್ರದ ಹಲವು ಸಂಘಟನೆಗಳು ಪಿಐಎಲ್ ಸಲ್ಲಿಸಿದ್ದವು. ಪಿಐಎಲ್ ವಿಚಾರಣೆ ನಡೆಸಿ ಪಂದ್ಯಗಳನ್ನ ಸ್ಥಳಾಂತರಕ್ಕೆ ಆದೇಶಿಸಿದ್ದ ಕೋರ್ಟ್, ಬಳಿಕ ಬಿಸಿಸಿಐ ಮನವಿಯನ್ನ ಪುರಸ್ಕರಿಸಿ ಪಂದ್ಯಗಳನ್ನ ನಡೆಸಲು ಅನುವು ಮಾಡಿಕೊಟ್ಟಿತ್ತು.

Please follow and like us:
error