‘‘ನೋಟು ರದ್ದತಿ ನಿಷ್ಪ್ರಯೋಜಕ. ಯುಪಿಎ ಇದೇ ಪ್ರಸ್ತಾವ ಇಟ್ಟಿತ್ತು. ನಾವು ಬೇಡ ಎಂದೆವು’’-ರಿಸರ್ವ್ ಬ್ಯಾಂಕ್ ಮಾಜಿ ಡೆಪ್ಯುಟಿ ಗವರ್ನರ್ ಚಕ್ರವರ್ತಿ

indian-pm-narendra-modi-russia-remains-our-principal-partnerಹೊಸದಿಲ್ಲಿ,ನ.18 : ನೋಟು ರದ್ದತಿಯ ಸರಕಾರದ ಕ್ರಮದ ಹಿಂದೆ ಯಾವುದೇ ಆರ್ಥಿಕ ತಾರ್ಕಿಕಾಧಾರವಿಲ್ಲ ಹಾಗೂ ಇಂತಹ ಪ್ರಸ್ತಾಪವನ್ನು ಈ ಹಿಂದೆ ಯುಪಿಎ ಸರಕಾರ ಕೂಡ ಇಟ್ಟಿತ್ತು ಎಂದು ಜೂನ್ 2009 ಹಾಗೂ ಮಾರ್ಚ್ 2014 ರ ತನಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಆಗಿದ್ದ ಕೆ ಸಿ ಚಕ್ರವರ್ತಿ ಹೇಳಿದ್ದಾರೆ.

ದಿ ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನೋಟು ರದ್ದತಿ ಕ್ರಮದಿಂದ ಸರಕಾರ ನೋಟುಗಳನ್ನು ಕೊಲ್ಲುತ್ತಿದೆಯೇ ಹೊರತುತೆರಿಗೆ ಪಾವತಿಸದವರನ್ನಲ್ಲ ಎಂದು ಹೇಳಿದರು.

‘‘ನಾವು ಒಂದು ಕಿಲೋ ಅಕ್ಕಿ ಖರೀದಿಸಿದಾಗ ಅದರಲ್ಲಿ ಕೆಲ ಕಲ್ಲುಗಳಿರುತ್ತವೆ. ನಾವು ಆ ಕಲ್ಲುಗಳನ್ನು ಹೆಕ್ಕಿ ತೆಗೆಯುತ್ತೇವೆಯೇ ವಿನಹ ಅಕ್ಕಿಯನ್ನು ಬಿಸಾಕುವುದಿಲ್ಲ. ಕಾನೂನು ಜಾರಿ ಸಂಸ್ಥೆಗಳು ಕಪ್ಪು ಹಣವಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕೇ ಹೊರತು ಸಾಮಾನ್ಯ ಜನರನ್ನು ಕಷ್ಟಕ್ಕೆ ದೂಡುವುದಲ್ಲ’’ ಎಂದು ಅವರು ಹೇಳಿದರು.

ಯುಪಿಎ ಆಡಳಿತಾವಧಿಯಲ್ಲಿ ನೋಟು ರದ್ದತಿ ಪ್ರಸ್ತಾಪ ಆಗಿನ ಸರಕಾರದಿಂದ ಬಂದಿತ್ತಾದರೂ ನಾವು ಬೇಡವೆಂದೆವು. ಈ ಪ್ರಸ್ತಾಪ ಮತ್ತೆ ಮುಂದುವರಿಯಲಿಲ್ಲ’’ ಎಂದು ಅವರು ನೆನಪಿಸಿಕೊಂಡರು.

ಇಂತಹ ಒಂದು ಕ್ರಮದಿಂದ ಯಾವುದೇ ಕಾರ್ಯ ಸಾಧನೆಯಾಗುವುದಿಲ್ಲ. ಅದರ ವೆಚ್ಚ ಅಧಿಕ ಹಾಗೂ ಲಾಭ ಕಡಿಮೆ ಎಂದು ನಾವು ಸರಕಾರಕ್ಕೆ ಆಗ ತಿಳಿಸಿದ್ದೆವು ಎಂದು ಅವರು ಹೇಳಿದರು.

‘‘ನೋಟು ರದ್ದತಿ ಈಗಾಗಲೇ ಬ್ಯಾಂಕಿಂಗ್ ರಂಗದ ಮೇಲೆ ಪರಿಣಾಮ ಬೀರಿದೆ. ಮುಂದಿನ ಎರಡು ತಿಂಗಳುಗಳ ಕಾಲ ಬ್ಯಾಂಕುಗಳು ಕೇವಲ ನೋಟು ವಿನಿಮಯ ಕಾರ್ಯಕ್ಕೇ ತಮ್ಮನ್ನು ಸೀಮಿತಗೊಳಿಸಲಿವೆ. ಬೇರೆ ಯಾವುದೇ ಬ್ಯಾಂಕಿಂಗ್ ವ್ಯವಹಾರ ನಡೆಯುವುದಿಲ್ಲ,’’ ಎಂದವರು ತಿಳಿಸಿದರು.

Leave a Reply