fbpx

ನನ್ನನ್ನು ಬಂಧಿಸಿ, ಜೈಲಿಗೆ ಹಾಕಿ; ಸುಪ್ರೀಂಗೆ ಹೈಕೋರ್ಟ್‌ ಜಡ್ಜ್‌ ನ್ಯಾ.ಕರ್ಣನ್‌ ಸವಾಲು

karnan-judgeಹೊಸದಿಲ್ಲಿ, ಮಾ.31:ನ್ಯಾಯಾಂಗ ನಿಂದನೆಯಾಗಿದ್ದರೆ ನನ್ನನ್ನು ಬಂಧಿಸಿ ಜೈಲಿಗೆ ಹಾಕಿ ಎಂದು ಕೋಲ್ಕತಾ ಹೈಕೋರ್ಟ್‌‌ ನ್ಯಾಯಮೂರ್ತಿ ಸಿ.ಎಸ್‌.ಕರ್ಣನ್‌  ಅವರು ಸುಪ್ರೀಂ ಕೋರ್ಟ್‌‌ನ ಏಳು ಸದಸ್ಯರ ಪೀಠಕ್ಕೆ ಸವಾಲು ಹಾಕಿದ್ದಾರೆ.
ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌‌ನ ನ್ಯಾಯಮೂರ್ತಿಗಳ  ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ  ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕರ್ಣನ್‌ ಇಂದು ಸುಪ್ರೀಂ ಕೋರ್ಟ್‌‌ಗೆ ಹಾಜರಾದರು.
ಪ್ರಕರಣಕ್ಕೆ ಸಂಬಂಧಿಸಿ  ಬೇಷರತ್‌ ಕ್ಷಮೆ  ಯಾಚಿಸಲು ಅವರಿಗೆ ನಾಲ್ಕು ವಾರಗಳ ಕಾಲವಕಾಶ ನೀಡಿರುವ ಸುಪ್ರೀಂ ಕೋರ್ಟ್‌ ಅಷ್ಟರ ತನಕ ನ್ಯಾಯಾಂಗ ಮತ್ತು ಆಡಳಿತಾತ್ಮಕ ಜವಾಬ್ದಾರಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ

ನೀಡಲು ಸಾಧ್ಯವಿಲ್ಲ   ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹಾರ್‌ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕರ್ಣನ್‌ಗೆ ಮಾ.೩೧ರ ಮೊದಲು ನ್ಯಾಯಾಲಯಕ್ಕೆ ನ್ಯಾಯಾಲಯ ವಾರೆಂಟ್‌ ಜಾರಿ ಮಾಡಿತ್ತು.
“ನಾನು ಮುಂದೆ ಕೋರ್ಟ್‌ ಹಾಜರಾಗುವುದಿಲ್ಲ.ನ್ಯಾಯಾಲಯವು ತನ್ನನ್ನು ಬಂಧಿಸಿ ಜೈಲಿಗೆ ಹಾಕಲಿ ಎಂದು ಕರ್ಣನ್‌ ಎಂದು ನ್ಯಾಯಪೀಠದ ಮುಂದೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Please follow and like us:
error

Leave a Reply

error: Content is protected !!