ದೇಶದ ಮೊದಲ ಇ-ಕೋರ್ಟ್ ಆಂಧ್ರಪ್ರದೇಶ – ತೆಲಂಗಾಣದಲ್ಲಿ ಆರಂಭ

ದೇಶದ ಮೊಟ್ಟ ಮೊದಲ ಇ-ಕೋರ್ಟ್ ಸೇವೆ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಭಾನುವಾರ ಪ್ರಾರಂಭವಾಗಿದೆ.ಈ ಮೂಲಕ ಏಕೀಕೃತ ಅಪರಾಧ ನ್ಯಾಯವ್ಯವಸ್ಥೆ (ಐಸಿಜೆಎಸ್) ಜಾರಿಗೊಳಿಸಿದ ಮೊದಲ ನ್ಯಾಯಾಲಯ ಎಂಬ ಕೀರ್ತಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಪಾತ್ರವಾಗಿವೆ. ಏಕೆಂದರೆ ಎರಡೂ ರಾಜ್ಯಗಳಿಗೆ ಆಂಧ್ರಪ್ರದೇಶ ಹೈಕೋರ್ಟ್ ವ್ಯಾಪ್ತಿಯನ್ನು ಹೊಂದಿದೆ.ಸುಪ್ರೀಂಕೋರ್ಟ್‌ನ ಇ-ಕೋರ್ಟ್ ಸಮಿತಿ ಮುಖ್ಯಸ್ಥ ನ್ಯಾ.ಮದನ್ ಬಿ.ಲೋಕ್ ಮಾತನಾಡಿ ‘‘ಇ-ಕೋರ್ಟ್‌ಗೆ ಪೊಲೀಸ್ ಠಾಣೆಗಳು, ಜೈಲುಗಳು, ಕಾನೂನು ಕ್ರಮ, ವಿಧಿ ವಿಜ್ಞಾನ ಪ್ರಯೋಗಾಲಯಗಳು ನ್ಯಾಯಾಲಯದ ಜತೆ ಸಂಯೋಜನೆಯಾಗಲು ಅವಶ್ಯಕವಿದ್ದ ತಾಂತ್ರಿಕತೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪೂರೈಸಿವೆ. ಇದು ಕೇವಲ ಇ-ಕೋರ್ಟ್ ಅಷ್ಟೇ ಅಲ್ಲದೇ, ಪೂರ್ತಿಯಾಗಿ ಕಂಪ್ಯೂಟರ್‌ಯುಕ್ತವಾಗಿದ್ದು, ಪೇಪರ್ ಮುಕ್ತ ನ್ಯಾಯಾಲಯವಾಗಿದೆ,’’ ಎಂದರು.

court

Please follow and like us:
error