fbpx

ಗುಜರಾತ್ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಬಿಜೆಪಿ – ಕಾಂಗ್ರೆಸ್  ಸಮಬಲದ ಹೋರಾಟ

ಹೊಸದಿಲ್ಲಿ, ಡಿ.18: ಗುಜರಾತ್ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ 83 ರಲ್ಲಿ , ಕಾಂಗ್ರೆಸ್  88ರಲ್ಲಿ  ಮತ್ತು 2ರಲ್ಲಿ ಇತರ ಪಕ್ಷಗಳು ಆರಂಭಿಕ ಮುನ್ನಡೆ  ಸಾಧಿಸಿದ್ದು, ಸಮಬಲದ ಹೋರಾಟ ನೀಡಿದೆ

*ರಾಜ್‌ಕೋಟ್‌ನಲ್ಲಿ(ಪಶ್ಚಿಮ) ಮುಖ್ಯಮಂತ್ರಿ ವಿಜಯ್ ರೂಪಾನಿ ಕಾಂಗ್ರೆಸ್‌ನ ಶ್ರೀಮಂತ ಅಭ್ಯರ್ಥಿ ಇಂದ್ರನಿಲ್ ರಾಜ್‌ಗುರು ವಿರುದ್ಧ ಮುನ್ನಡೆಯಲ್ಲಿದ್ದಾರೆ.

*ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮೆಹಸಾನಾ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.

*ಕಾಂಗ್ರೆಸ್ ಸಿಎಂ ಅಭ್ಯರ್ಥಿ ಶಕ್ತಿ ಸಿನ್ಹಾ ಗೋಯಲ್ ಹಿನ್ನಡೆಯಲ್ಲಿದ್ದಾರೆ.

*ರಾಧನ್‌ಪುರ ಕ್ಷೇತ್ರದಲ್ಲಿ ಒಬಿಸಿ ಹೋರಾಟಗಾರ ಅಲ್ಪೇಶ್ ಕುಮಾರ್  ಠಾಕೂರ್ ಮುನ್ನಡೆ ಸಾಧಿಸಿದ್ದಾರೆ.

*ವಡಗಾವ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿಗ್ನೇಶ್ ಮೆವಾನಿಗೆ ಬಿಜೆಪಿಯ ವಿಜಯ್ ಚಕ್ರವರ್ತಿ ವಿರುದ್ಧ ಮುನ್ನಡೆಯಲ್ಲಿದ್ದಾರೆ

*ಗುಜರಾತ್ ಬಿಜೆಪಿ  ರಾಜ್ಯಾಧ್ಯಕ್ಷ ಜೀತುಭಾಯ್  ವಗಾನಿ  ಭಾವ್ ನಗರ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ.

* ರಾಜ್ ಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಗುಜರಾತ್ ಸಿಎಂ ವಿಜಯ್ ರೂಪಾನಿ ಹಿನ್ನಡೆ ಅನುಭವಿಸಿದ್ದಾರೆ.

* ಗುಜರಾತ್ ನಲ್ಲಿ ಎರಡು ದಶಕಗಳ ಬಳಿಕ ಸ್ಥಾನಗಳ  ಗಳಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

*ಕಾಂಗ್ರೆಸ್ ಸ್ಥಾನಗಳ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ.

Please follow and like us:
error
error: Content is protected !!