ಉಲ್ಫಾ ಉಗ್ರರಿಂದ ಬಿಜೆಪಿ ನಾಯಕನ ಪುತ್ರನ ಅಪಹರಣ : ಭಾರೀ ಮೊತ್ತದ ಬೇಡಿಕೆ

ulfa-kidnap

ಗುವಾಹತಿ,  ಅಸ್ಸಾಂನ ಬಿಜೆಪಿ ನಾಯಕನೊಬ್ಬನ ಅಪಹೃತ ಪುತ್ರ ಸಹಾಯಕ್ಕಾಗಿ ಮನವಿ ಮಾಡುತ್ತಿರುವ ವೀಡಿಯೊ ಒಂದನ್ನು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ಬಿಡುಗಡೆ ಮಾಡಿದೆ. ಆತನ ಬಿಡುಗಡೆಗಾಗಿ ಅದು ರೂ. 1 ಕೋಟಿಯ ಬೇಡಿಕೆಯಿರಿಸಿದೆ.
ಬಿಜೆಪಿ ನಾಯಕ ರತ್ನೇಶ್ವರ್ ಮೊರಾನ್‌ರ ಕುಲದೀಪ್ ಎಂಬಾತನನ್ನು ಉಲ್ಫಾ ಆ.1ರಂದು ಅರುಣಾಚಲ ಪ್ರದೇಶದಿಂದ ಅಪಹರಿಸಿದೆಯೆಂದು ಪೊಲೀಸರು ಹೇಳುತ್ತಿದ್ದಾರೆ.
ಹಸಿರು ಟಿ-ಶರ್ಟ್ ತೊಟ್ಟಿರುವ ಕುಲದೀಪ್ ಮೊರಾನ್, ಮೊಣಕಾಳುರಿ ಕುಳಿತಿದ್ದು, ಆತನ ಸುತ್ತ ಐವರು ಮುಖವಾಡಧಾರಿಗಳು ರೈಫಲ್‌ಗಳನ್ನು ಹಿಡಿದು ನಿಂತಿರುವುದು ವೀಡಿಯೊದಲ್ಲಿದೆ.
ತಾನು ಅತ್ಯಂತ ದುರ್ಬಲವಾಗಿದ್ದೇನೆ. ತನ್ನ ಆರೋಗ್ಯವೂ ಹದಗೆಟ್ಟಿದೆಯೆಂದು ಕುಲದೀಪ್ ವೀಡಿಯೊದಲ್ಲಿ ಹೇಳಿದ್ದಾನೆ.
ಈ ಪ್ರದೇಶದಲ್ಲಿ ಉಲ್ಫಾದಿಂದ ಅಪಹರಣ ಸಾಮಾನ್ಯವಾಗಿದೆ. ಆದರೆ ವೀಡಿಯೊ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.
ತನ್ನ ಬಿಡುಗಡೆಗೆ ಸಹಾಯ ಮಾಡುವಂತೆ ಕುಲದೀಪ್, ತನ್ನ ಹೆತ್ತವರು ಹಾಗೂ ಮುಖ್ಯಮಂತ್ರಿ ಸರ್ವಾನಂದ ಸೋನೋವಾಲ್‌ರನ್ನು ವೀಡಿಯೊದಲ್ಲಿ ಬೇಡಿಕೊಳ್ಳುತ್ತಿದ್ದಾನೆ.

Please follow and like us:
error

Related posts

Leave a Comment