ನಿಮ್ಮಂಥವರ ಸಂತತಿ ಸಾವಿರ ಸಾವಿರವಾಗಲಿ

ಈ ಹೆಣ್ಣುಮಗಳ ಕುರಿತು ಗೌರವ ಉಂಟಾಗುವುದೇ ಈ ಕಾರಣಕ್ಕೆ. ಕರೋನಾ ಬಂದಾಗ ಈಕೆ ಚಪ್ಪಾಳೆ ಹೊಡೀರಿ, ಕ್ಯಾಂಡಲ್ ಹಚ್ಚಿ, ತಟ್ಟೆ ಬಡೀರಿ ಎಂದು ಚಿತ್ರವಿಚಿತ್ರ ಟಾಸ್ಕ್ ಕೊಡಲಿಲ್ಲ. ಆಕೆಗೆ ಚೆನ್ನಾಗಿ ಗೊತ್ತಿತ್ತು, ಕರೋನಾದ ಟಾಸ್ಕ್ ಎದುರಿಸಬೇಕಾಗಿರುವುದು ಮುಖ್ಯವಾಗಿ ಸರ್ಕಾರವೇ, ಜವಾಬ್ದಾರಿ ತನ್ನದೇ ಎಂದು. ಕರೋನಾ ಜತೆ ಬದುಕುವುದನ್ನು ಕಲಿಯಿರಿ ಎಂದು ಜನರಿಗೆ ಉಪದೇಶ ಮಾಡದೇ, ತಾವೇ ಮುಂದೆ ನಿಂತು ಹೋರಾಡಿದರು. ನ್ಯೂಜಿಲ್ಯಾಂಡ್ ಕರೋನಾ ಮುಕ್ತವಾಗಿದೆ ಎಂದು ಗೊತ್ತಾದ ದಿನ ನೀವೇನು ಮಾಡಿದಿರಿ ಎಂದರೆ ಜೆಸಿಂಡಾ ಹೇಳಿದರು, ಖುಷಿಯಿಂದ ಡ್ಯಾನ್ಸ್ ಮಾಡಿದೆ ಎಂದು! ಅದು ಒಬ್ಬ ತಾಯಿಯ ಖುಷಿ. ಪ್ರಧಾನಿಯಾಗಿದ್ದಾಗಲೇ ತಾಯಿಯಾದವರು ಜೆಸಿಂಡಾ. ಒಬ್ಬ ತಾಯಿಗಷ್ಟೆ ಗೊತ್ತು ತಾಯ್ತನದ ಭಾವ. ಆಕೆ ಇಡೀ‌ ನ್ಯೂಜಿಲ್ಯಾಂಡ್ ಜನತೆಗೇ ತಾಯಿಯಾಗಿಬಿಟ್ಟರು. ಎಂಥ ಅದ್ಭುತ ಜೀವ ಜೆಸಿಂಡಾ. ನಿಮ್ಮಂಥವರ ಸಂತತಿ ಸಾವಿರ ಸಾವಿರವಾಗಲಿ.- ದಿನೇಶ್ ಕುಮಾರ್

Please follow and like us:
error