ಹತ್ರಾಸ್ ಅತ್ಯಾಚಾರ : ಸುಪ್ರೀಂಕೋರ್ಟ್ ನಿರ್ದೇಶನ ನಾಲ್ಕು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್

ಹಾತ್ರಾಸ್ ನಲ್ಲಿ ದಲಿತ ಹೆಣ್ಣುಮಗಳ ಮೇಲೆ ನಡೆದ ಅತ್ಯಾಚಾರವನ್ನು ನಡೆದೇ ಇಲ್ಲ ಎಂದು ಬಿಂಬಿಸಿದವು‌‌ ಕೆಲ ಬೂಟುನೆಕ್ಕಿಗ ಮಾಧ್ಯಮಗಳು ಮತ್ತು ಐಟಿ ಸೆಲ್.‌ ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸಿಬಿಐ ಈಗ ನಾಲ್ಕು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಚಾರ್ಜ್ ಶೀಟ್ ಬಹಳ ಸ್ಪಷ್ಟವಾಗಿ ಪೊಲೀಸರ ಕುತಂತ್ರ ಮತ್ತು ಬೇಜವಾಬ್ದಾರಿಯನ್ನು ಬಯಲು ಮಾಡಿದೆ. ಸಿಬಿಐ‌ ಪ್ರಕಾರ ಸಂತ್ರಸ್ಥೆಯ ಹೇಳಿಕೆಯನ್ನು ದಾಖಲಿಸಿಕೊಳ್ಳದೆ ಪೊಲೀಸರು ಪ್ರಮಾದವೆಸಗಿದ್ದಾರೆ. ಸೆಪ್ಟೆಂಬರ್ 14ರಂದು ಘಟನೆ ನಡೆದ ದಿನವೇ ಸಂತ್ರಸ್ಥೆ ಅತ್ಯಾಚಾರವಾಗಿರುವುದಾಗಿ ಪೊಲೀಸರ ಬಳಿ‌ಹೇಳಿದ್ದಳು. ಆದರೆ ಪೊಲೀಸರು ಅತ್ಯಾಚಾರದ ಪ್ರಕರಣ ದಾಖಲಿಸಲಿಲ್ಲ, ಬದಲಾಗಿ ಕೊಲೆಯತ್ನ ಪ್ರಕರಣ ದಾಖಲಿಸಿದರು. ಅತ್ಯಾಚಾರವಾಗಿದೆ ಎಂದು ಹೇಳಿದರೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿಲ್ಲ. ಅದೇ ದಿನ ಸಂತ್ರಸ್ಥೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ ಅಲಿಘಡದ ಆಸ್ಪತ್ರೆಗೆ ದಾಖಲಿಸಲಾಯಿತು. ಸೆಪ್ಟೆಂಬರ್ 19 ರಂದು ಸಂತ್ರಸ್ಥೆ ಮತ್ತೆ ಹೇಳಿಕೆ ನೀಡಿ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವುದನ್ನು ಬಹಿರಂಗಪಡಿಸಿದ್ದಳು. ಲೈಂಗಿಕ‌ ಕಿರುಕುಳದ ಸೆಕ್ಷನ್ (ಸೆಕ್ಷನ್ 354) ಸೇರಿಸಿದ ಪೊಲೀಸರು ಆಮೇಲೂ ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿಲ್ಲ. ಸಿಬಿಐ ಚಾರ್ಜ್ ಶೀಟ್ ಪೊಲೀಸರು ಬೇಕೆಂದೇ, ಸಾಕ್ಷ್ಯ ನಾಶ ಮಾಡಲೆಂದೇ ವೈದ್ಯಕೀಯ ಪರೀಕ್ಷೆ ನಡೆಸಲಿಲ್ಲ ಎಂದು‌ಹೇಳಿದೆ.
ಕೊನೆಯದಾಗಿ ಸಂತ್ರಸ್ಥೆ ನೀಡಿದ ಹೇಳಿಕೆಯಂತೆ ಅತ್ಯಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ವೈದ್ಯಕೀಯ ಪರೀಕ್ಷೆ ನಡೆದಿದ್ದು ಸೆಪ್ಟೆಂಬರ್ 22ರಂದು! ಅತ್ಯಾಚಾರವಾದ ಎಂಟು‌ದಿನಗಳ ನಂತರ!
ಸಂತ್ರಸ್ಥೆಯ ಪೋಸ್ಟ್ ಮಾರ್ಟಂ ವರದಿಯಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ, ಅತ್ಯಾಚಾರವೇ ನಡೆದಿಲ್ಲ ಎಂದು‌ಹೇಳಲಾಗಿದೆ. ಆದರೆ ಅದೇ ವರದಿಯಲ್ಲಿ ಆಕೆಯ ಖಾಸಗಿ ಅಂಗದಲ್ಲಿ ಗಾಯವಾಗಿರುವುದರ ಉಲ್ಲೇಖವಿದೆ! ಇದಲ್ಲದೆ, ಆಕೆಗೆ ಆಗಿರುವ multiple fractures, severe spinal injury, paralysis ಜತೆಗೆ ನಾಲಿಗೆಯಲ್ಲಿ ಆದ ಆಳವಾದ ಗಾಯವನ್ನೂ ಉಲ್ಲೇಖಿಸಲಾಗಿದೆ.
ಸಿಬಿಐ ಚಾರ್ಜ್ ಶೀಟ್ ನಲ್ಲಿ ಪೊಲೀಸರು ನಡೆಸಿದ ಎಲ್ಲ ಹೀನ ಕುತಂತ್ರಗಳ‌ ಕುರಿತೂ ಮಾಹಿತಿ‌ ನೀಡಲಾಗಿದೆ, ಅಷ್ಟೇ ಅಲ್ಲದೆ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ‌ ಕೋರಲಾಗಿದೆ.
ಒಂದುವೇಳೆ ಸಂತ್ರಸ್ಥೆಯು ಆಸ್ಪತ್ರೆಯಲ್ಲಿದ್ದಾಗ ನೀಡಿದ್ದ ಮರಣಪೂರ್ವ ಹೇಳಿಕೆಯ‌ ವಿಡಿಯೋ ವೈರಲ್ ಆಗದೇ ಹೋಗಿದ್ದರೆ, ‌ಈ‌ ಕೇಸು ಯಾವತ್ತೋ ಬಿದ್ದುಹೋಗಿರುತ್ತಿತ್ತು.
ಅದೆಲ್ಲ ಹಾಗಿರಲಿ, ಇಡೀ‌ ಸಂತ್ರಸ್ಥೆ ಕುಟುಂಬವನ್ನೇ ದೂಷಿಸಿ‌ ತೀಟೆ ತೀರಿಸಿಕೊಂಡ ಹಿಂಸಾವಿನೋದಿಗಳು ಈಗೇನೆನ್ನುತ್ತಾರೆ?

-ದಿನೇಶಕುಮಾರ್ ಎಸ್.ಸಿ

Please follow and like us:
error