ಕನ್ನಡಕ್ಕಿಂತ ದೊಡ್ಡವರು, ದೊಡ್ಡದು ಯಾರೂ, ಯಾವುದೂ ಇಲ್ಲ- ದಿನೇಶ್ ಕುಮಾರ್ ಎಸ್.ಸಿ.

 

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ‘ಹಿಂದಿ ರಾಷ್ಟ್ರ ಭಾಷೆ, ಅದಕ್ಕೆ ವಿರೋಧ ಸಲ್ಲದು’ ಎಂದು ಹೇಳುವುದು ಆಕಸ್ಮಿಕ ಹೇಳಿಕೆಯಲ್ಲ. ಇದುದ ಭಾಗ.

ಕನ್ನಡನೆಟ್ ನ್ಯೂಸ್ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ‘ಹಿಂದಿ ರಾಷ್ಟ್ರ ಭಾಷೆ, ಅದಕ್ಕೆ ವಿರೋಧ ಸಲ್ಲದು’ ಎಂದು ಹೇಳುವುದು ಆಕಸ್ಮಿಕ ಹೇಳಿಕೆಯಲ್ಲ. ಇದು ಹಿಂದಿ ಸಾಮ್ರಾಜ್ಯಶಾಹಿಯ ರಾಜಕೀಯ ಅಜೆಂಡಾದ ಭಾಗ. ಕನ್ನಡವನ್ನು ಕನ್ನಡಿಗರಿಂದ ದಮನಗೊಳಿಸುವುದು ಈ ಸಾಮ್ರಾಜ್ಯಶಾಹಿಯ ಕುತಂತ್ರ. ತೇಜಸ್ವಿ ಸೂರ್ಯ, ಸಿ.ಟಿ.ರವಿ ಥರದವರು ಆಗಾಗ ಹಿಂದಿ ಹೇರಿಕೆ

ಪರವಾಗಿ ಬ್ಯಾಟ್ ಬೀಸುವುದನ್ನು ನಾವು ಗಮನಿಸಿದ್ದೇವೆ. ಈಗ ಸಾಹಿತಿಗಳ ಬಾಯಿಂದಲೂ ಅದನ್ನೇ ಹೇಳಿಸುತ್ತಿದ್ದಾರೆ

ಹಿಂದಿ ಸಾಮ್ರಾಜ್ಯಶಾಹಿಯ ಗುರಿ ದೇಶವನ್ನು ಹಿಂದಿಯನ್ನರು ಮಾತ್ರ ಆಳಬೇಕು, ಹಿಂದಿಯೇತರರು ಎರಡನೇ ದರ್ಜೆ ಪ್ರಜೆಗಳಾಗಬೇಕು. ಮುಂಬರುವ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಹಿಂದಿಯನ್ನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು. ಹಿಂದಿಯೇತರ ತಾಯ್ನುಡಿಗಳನ್ನೆಲ್ಲ ನಾಶಮಾಡಿ ದೇಶಕ್ಕೆ ಒಂದೇ ಭಾಷೆ ಇರುವಂತೆ ಮಾಡುವುದು.

ದೊಡ್ಡರಂಗೇಗೌಡರಂಥವರು ಈ ಹಿಂದಿ ಸಾಮ್ರಾಜ್ಯ

 

ಶಾಹಿಯ ಸಣ್ಣ ಹತಾರಗಳಲ್ಲಿ ಒಂದು. ಅಂಥವರನ್ನು ಹೇಗೆ ಬಳಸಿ ಬಿಸಾಡುವುದೆಂಬುದು ಅದಕ್ಕೆ ಚೆನ್ನಾಗಿ ಗೊತ್ತಿದೆ. ಹಿಂದೀಕರಣದ ಅಪಾಯಗಳ ಬಗ್ಗೆ ಅತ್ಯಂತ ಸ್ಪಷ್ಟ ತಿಳಿ

 

ವಳಿಕೆ, ದೂರಾಲೋಚನೆ ಇದ್ದಿದ್ದು ರಾಷ್ಟ್ರಕವಿ ಕುವೆಂಪು ಅವರಿಗೆ ಮಾತ್ರವೇ. ಆದರೆ ಆ ಕಾಲದಿಂದಲೂ ನಮ್ಮ ಸಾಹಿತಿಗಳು ಹಿಂದಿಯ ಅಪಾಯಗಳ ಕುರಿತು ಮಾತನಾಡಲೇ ಇಲ್ಲ, ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.

ಈಗಲೂ ಅಷ್ಟೆ, ಹಿಂದಿಹೇರಿಕೆ ಕುರಿತು ಜಾಗೃತಿ ಮೂಡಿಸುತ್ತ, ಮುಂಬರುವ ಅಪಾಯಗಳ ಕುರಿತು ಹೆಚ್ಚುಹೆಚ್ಚು ಮಾತನಾಡುತ್ತಿರುವುದು ಕನ್ನಡಪರ ಚಳವಳಿಗಾರರೇ ಹೊರತು ಸಾಹಿತಿ

 

ಗಳಲ್ಲ. ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಮೆಟ್ರೋದಲ್ಲಿನ ಹಿಂದಿಹೇರಿಕೆಯನ್ನು ತೀವ್ರರೂಪದಲ್ಲಿ ಪ್ರತಿಭಟಿಸಿ ಒಂದೇ ದಿನ, ಒಂದೇ ಸಮಯದಲ್ಲಿ ಎಲ್ಲ ನಿಲ್ದಾಣಗಳಿಗೆ ನುಗ್ಗಿ ಅಲ್ಲಿನ ಬೋರ್ಡುಗಳನ್ನು ಕಿತ್ತು ಎಸೆದಾಗ ಬಹಳಷ್ಟು ಸಾಹಿತಿಗಳು ಮೌನವಾಗೇ ಇದ್ದರು.  ಅಪಾಯ ತುಂಬ ದೊಡ್ಡದಿದೆ. ಕತ್ತಿ ನಮ್ಮವರೇ ಪ್ರತಿಭಟಿಸಿದರೆ ಅದೇನು ಹೂವೇ ಎಂದು ಪ್ರಶ್ನಿಸಿದ್ದರು ಕುವೆಂಪು. ಈಗ ತಿವಿಯು

 

ತ್ತಿರುವವರು ನಮ್ಮವರೇ. ಹಿಂದೆ #StopHindiImperialism  ಎಂದು ಅಭಿಯಾನ ಮಾಡುತ್ತಿದ್ದ ನಾವು ಈಗ #ಹಿಂದಿಗುಲಾಮಗಿರಿಬೇಡ ಎಂದು ನಮ್ಮವರನ್ನೇ ಎಚ್ಚರಿಸುವ ಹಂತಕ್ಕೆ ತಲುಪಿದ್ದೇವೆ.

 

ಕನ್ನಡಕ್ಕಿಂತ ದೊಡ್ಡವರು, ದೊಡ್ಡದು ಯಾರೂ, ಯಾವುದೂ ಇಲ್ಲ. ಇದನ್ನು ದೊಡ್ಡರಂಗೇಗೌಡರಂಥವರಿಗೆ ಅರ್ಥ ಮಾಡಿಸುವುದು ಹೇಗೆ? ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು, ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿರುವವರನ್ನು ಹೇಗೆ ಎಬ್ಬಿಸುವುದು?

 

 

Please follow and like us:
error