ಆಮ್ನೆಸ್ಟಿ ಇಂಟರ್‌ನ್ಯಾಷನಲ್’ ದೇಶದ್ರೋಹಿ-ರಾಜ್ಯದ್ರೋಹಿಯೇ?

-ಡಾ. ವಿ. ಲಕ್ಷ್ಮೀನಾರಾಯಣ, ಮೈಸೂರು

 

amnesty-antinational

ಆ ಮ್ನೆಸ್ಟಿ ಇಂಟರ್‌ನ್ಯಾಷನಲ್ ಒಂದು ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಸಂಸ್ಥೆ. ರಾಜಕೀಯೇತರ ಸಂಸ್ಥೆಯಾದ ಅದಕ್ಕೆ ಸಾವಿರಾರು ಸದಸ್ಯರಿದ್ದು, ಅನೇಕಾನೇಕ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರದ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ಕಳೆದ ಶನಿವಾರ ಬೆಂಗಳೂರಿನಲ್ಲಿ ವಿಚಾರ ಸಂಕಿರಣದ ಸಂಬಂಧ ರಾಜ್ಯ ದ್ರೋಹದ ಆರೋಪಕ್ಕೆ ಗುರಿಯಾಗಿದೆ. ಅದು ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಯೂನಿವರ್ಸಿಟಿಯಲ್ಲಿ ಕಾಶ್ಮೀರದಲ್ಲಿ ‘‘ಕಣ್ಮರೆಯಾದ ಮಕ್ಕಳ ಪಾಲಕರ’’ ಸಮಾವೇಶವನ್ನು ‘ಬ್ರೋಕನ್ ಫ್ಯಾಮಿಲಿ’, ಎಂಬ ಹೆಸರಿನಲ್ಲಿ ಸಂಘಟಿಸಿತ್ತು. ಇದರಲ್ಲಿ ಸುಪ್ರಸಿದ್ಧ ಪತ್ರಿಕಾ ಕರ್ತರು ಮತ್ತು ಬುದ್ಧಿಜೀವಿಗಳು ಭಾಗವಹಿಸಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಯ ವಿವರಗಳನ್ನು ಮಂಡಿಸಿದ ನಂತರ, ಸಭೆಯ ಕೊನೆಯಲ್ಲಿ ಕೆಲವರು ಭಾರತ ವಿರೋಧಿ ಮತ್ತು ಭಾರತದ ಸೈನ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಬಲಪಂಥೀಯ ಗುಂಪುಗಳಿಂದ ಘೋಷಣೆ ಬಂದವು. ಅದೇ ದಿನ ರಾತ್ರಿ ಕಾಲೇಜಿನ ವಿರುದ್ಧ ಎಬಿವಿಪಿಯಿಂದ ದೂರು ದಾಖಲಿಸಲಾಯಿತು. ರವಿವಾರ ಮಿಲ್ಲರ್ ರಸ್ತೆಯ ಕ್ರೈಸ್ಟ್ ಕಾಲೇಜಿನ ಮುಂದೆ ಎಬಿವಿಪಿಯಿಂದ ಪ್ರತಿಭಟನೆ ನಡೆದು, ಸಂಘಟಕರನ್ನು ಬಂದಿಸುವಂತೆ ಆಗ್ರಹಿಸಲಾಯಿತು. ಆ ಸಂದರ್ಭದಲ್ಲಿ ಪೊಲೀಸರು ಪ್ರಥಮ ದಾಖಲಾತಿ ವರದಿ ದಾಖಲಿಸಲಿರಲಿಲ್ಲ. ಕಾನೂನು ಪಂಡಿತರ ಸಲಹೆ ಪಡೆಯುವುದಾಗಿ ಹೇಳಲಾಗಿತ್ತು. ಆಗಸ್ಟ್ 15 ಸ್ವಾತಂತ್ರ್ಯ ದಿನವಾದ ಸೋಮವಾರ ಜೆಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿ ಮತ್ತು ಪ್ರಥಮ ಆರೋಪಿಯನ್ನಾಗಿ ಆಮ್ನೆಸ್ಟಿ ಇಂಟರನ್ಯಾಷನಲ್ ಎಂದು ಹೆಸರಿಸಲಾಯಿತು. ಅದರಲ್ಲಿ ರಾಜ್ಯ ದ್ರೋಹ ಮತ್ತು ಇತರ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈಗ ಗೃಹ ಮಂತ್ರಿಗಳು ಆಧಾರಗಳಿದ್ದರೆ ಮಾತ್ರ ಪ್ರಕರಣದಲ್ಲಿ ಆರೋಪ ಪಟ್ಟಿ ದಾಖಲು ಮಾಡಲಾಗುವುದು ಎಂದು ಹೇಳಿದ್ದಾರೆ. ಎನೇ ಆದರೂ, ಈ ಘಟನೆಯಿಂದಾಗಿ ಕೆಲವು ಪ್ರಶ್ನೆಗಳ ಬಗ್ಗೆ ಪ್ರಜ್ಞಾವಂತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಗಮನ ಹರಿಸಬೇಕಾಗಿದೆ.

ಪ್ರಥಮವಾಗಿ, ಕರ್ನಾಟಕ ಸರಕಾರ ಆರೆಸ್ಸೆಸ್ ಮತ್ತು ಬಿಜೆಪಿ ಒತ್ತಡಕ್ಕೆ ಮಣಿದು ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯ ಮೇಲೆ ರಾಜ್ಯದ್ರೋಹದ ಕೇಸ್ ದಾಖಲಿಸಿ ಕೋಮುವಾದಿಗಳನ್ನು ಒಲೈಸುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆ ದಿನದ ಸಭೆಯಲ್ಲಿ ಕಾಶ್ಮೀರಿ ಕುಟುಂಬಗಳ ಕಥೆಯನ್ನು ಕೇಳಿದ ನಂತರ ಕಾಶ್ಮೀರಿ ಪಂಡಿತರಿಗೂ ಮಾತನಾಡಲು ಅವಕಾಶ ನೀಡಲಾಗಿತ್ತು. ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಆಝಾದಿ ಘೋಷಣೆ ಕೂಗಿದರೆನ್ನಲಾಗಿದೆ. ಆಝಾದಿ ಘೋಷಣೆ ಕೂಗಿದ ಮಾತ್ರಕ್ಕೆ ರಾಜ್ಯ ದ್ರೋಹ ಎನ್ನುವುದಾದರೆ, ಇಡೀ ಕಾಶ್ಮೀರಿ ಕಣಿವೆಯ ಜನರನ್ನು ಸಾರಾಸಗಟಾಗಿ ಜೈಲಿಗೆ ತಳ್ಳ ಬೇಕಾಗುತ್ತದೆ. ಏಕೆಂದರೆ ಆಝಾದಿ ಎಂಬ ಪದ ಅನೇಕರಿಗೆ, ಅನೇಕ ಅರ್ಥ ನೀಡುತ್ತದೆ. ಸಾಮಾನ್ಯ ಜನರಿಗೆ ಯಾವುದೇ ಮಿಲಿಟರಿ ಮಧ್ಯ ಪ್ರವೇಶವಿಲ್ಲದ ಶಾಂತಿಯುತ ಸಾಮಾನ್ಯ ಬದುಕೇ ಆಝಾದಿ ಎಂದು ಅರ್ಥವೂ ಇದೆ. ಗತ ವಸಾಹತುಶಾಹಿಯ ಕಾಲ 1860 ರ ರಾಜ್ಯದ್ರೋಹ ಕಾನೂನಿನಲ್ಲೂ, ಪ್ರಭುತ್ವವನ್ನು ಕಾನೂನಿನ ಬಾಹಿರವಾಗಿ ಬುಡಮೇಲು ಮಾಡುವ ಯಾ ಸಶಸ್ತ್ರ ದಂಗೆಗೆ ಕರೆ ನೀಡಿದಾಗ ಮಾತ್ರ ರಾಜ್ಯ ದ್ರೋಹ ಎಂದು ಹೇಳಲಾಗಿದೆ. ಘೋಷಣೆ ಕೂಗುವುದು ಇದರಲ್ಲಿ ಸೇರಿಲ್ಲ. ಆಮ್ನೆಸ್ಟಿ ತನ್ನ ವಿವರಣೆಯಲ್ಲಿ ತಮ್ಮ ಯಾವ ಸದಸ್ಯರೂ ರಾಜ್ಯವಿರೋಧಿ ಘೋಷಣೆ ಕೂಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ, ಆದಾಗ್ಯೂ ಅದನ್ನೇ ಪ್ರಥಮ ಆರೋಪಿಯನ್ನಾಗಿಸಿರುವುದು ನ್ಯಾಯ ಸಮ್ಮತವಲ್ಲ. ತಮ್ಮ ವಿರೋಧಿಗಳನ್ನು ರಾಷ್ಟ್ರವಿರೋಧಿಯೆಂದು ಹೇಳಿ ಹೀನ ರಾಜಕೀಯ ಮಾಡುವುದೇ ಕೋಮುವಾದಿಗಳ ಚಾಳಿಯಾಗಿದೆ. ಆಮ್ನೆಸ್ಟಿ ‘ರಾಷ್ಟ್ರದ್ರೋಹಿ’ಯೆನ್ನುವುದು ಬಿಜೆಪಿಯ ಅಂಗ ಸಂಸ್ಥೆಗಳ ರಾಜಕೀಯ ಆರೋಪ. ಅದನ್ನು ರಾಜಕೀಯವಾಗಿಯೇ ಪರಿಗಣಿಸಬೇಕಿತ್ತು. ಬದಲಾಗಿ ಪುಸಕ್ಕನೆ ಪೊಲೀಸರು ರಾಜ್ಯದ್ರೋಹದ ಪ್ರಕರಣ ದಾಖಲಿಸಿರುವುದು ಕಾಂಗ್ರೆಸ್ ಸರಕಾರ ಬಿಜೆಪಿಯನ್ನು ಒಲೈಸಲಿಕ್ಕೆ ಮಾಡಿದ ಕೆಲಸವೆಂದು ಅನಿವಾರ್ಯವಾಗಿ ಎನ್ನಬೇಕಾಗುತ್ತದೆ.
ಈ ಹಿಂದೆ ರೋಹಿತ್ ವೇಮುಲಾರ ಮೇಲೂ ಸುಳ್ಳು ದೂರು ಹಾಕುವುದರಿಂದಲೇ ಕೋಮುವಾದಿಗಳಿಂದ ದಲಿತರ ಮೇಲೆ ಚಿತ್ರಹಿಂಸೆ ಪ್ರಾರಂಭವಾಯಿತು. ಅದೇ ರೀತಿ ಜೆಎನ್‌ಯುನ ಕನ್ಹಯ್ಯಾ ಕುಮಾರ್ ಮತ್ತಿತರರ ಮೇಲೂ ಇದೇ ತಂತ್ರ ಅನುಸರಿಸಲಾಯಿತು. ದೇಶಾದ್ಯಂತ ಕೋಮುವಾದಿಗಳ ತಂತ್ರದ ಉದ್ದೇಶ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಆಮ್ನೆಸ್ಟಿಯಂತಹ ಮಾನವ ಹಕ್ಕುಗಳ ಸಂಸ್ಥೆಗಳನ್ನು ಕರಾಳ ಕಾನೂನುಗಳ ಚಿತ್ರಹಿಂಸೆಗೆ ಒಳಗಾಗಿಸಬೇಕೆಂಬುದೇ ಆಗಿದೆ. ಏಕೆಂದರೆ ಕಾನೂನಿನ ಪ್ರಕ್ರಿಯೆಯೇ ಈ ದೇಶದಲ್ಲಿ ಶಿಕ್ಷೆ ಆಗಿದೆ.
ಕರ್ನಾಟಕ ಸರಕಾರ ಇಂತಹ ಕೋಮುವಾದಿಗಳ ಪಿತೂರಿಗೆ ಆತುರದ ಕ್ರಮ ತೆಗೆದುಕೊಳ್ಳುವ ಓಲೈಕೆಯ ಪ್ರವೃತ್ತಿಯನ್ನು ಕೈ ಬಿಡಬೇಕಾಗಿದೆ. ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ರಾಜಕೀಯವಾಗಿ ಎದುರಿಸುವ ಬದಲಾಗಿ ಕರ್ನಾಟಕದಲ್ಲಿ ಮಾನವ ಹಕ್ಕುಗಳ ಸಂಸ್ಥೆಗಳಿಗೆ ವಿಘ್ನಗಳನ್ನು ಮಾಡುವ ಕಾರ್ಯಗಳಲ್ಲಿ ತೊಡಗಿರುವ ಬಲಪಂಥೀಯರ ಹುನ್ನಾರಗಳನ್ನು ಮಾನ್ಯ ಮಾಡಬಾರದೆಂದು ಸಿದ್ದರಾಮಯ್ಯನವರ ಸರಕಾರಕ್ಕೆ ವಿನಂತಿ

-varthabharati

Please follow and like us:
error